ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಭಾರೀ ಸದ್ದು ಮಾಡುತ್ತಿದೆ. ಆದರೆ ಈಗ ಸಿಎಂ ಸ್ಥಾನದಿಂದ ಬಿಎಸ್ ವೈ ರನ್ನು ಪದಚ್ಯುತಗೊಳಿಸಿದರೆ ಅದರ ನಷ್ಟ ಬಿಜೆಪಿಗೇ.
ಕಳೆದ ಬಾರಿಯೂ ಬಿಜೆಪಿ ಅಧಿಕಾರಕ್ಕೇರಿದಾಗ ಮೂರು ಬಾರಿ ಮುಖ್ಯಮಂತ್ರಿ ಬದಲಾವಣೆಯಾಗಿತ್ತು. ಬಿಜೆಪಿಯೊಳಗಿನ ಈ ಕಚ್ಚಾಟದಿಂದಾಗಿಯೇ ಮತ್ತೆ ಅಧಿಕಾರಕ್ಕೇರಲು ವಿಫಲವಾಗಿತ್ತು.
ಈಗ ಹೇಗೋ ಅಧಿಕಾರ ಸಿಕ್ಕಿದೆ. ಆದರೆ ಇದನ್ನು ಉಳಿಸಿಕೊಳ್ಳುವ ಬದಲು ಮತ್ತೆ ಸಿಎಂ ಬದಲಾವಣೆ ಸರ್ಕಸ್ ಮಾಡುತ್ತಾ ಕೂತರೆ ಮತ್ತೆ ಜನರ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ. ಜೊತೆಗೆ ಹಿರಿಯ ನಾಯಕ ಯಡಿಯೂರಪ್ಪನವರನ್ನು ಕುರ್ಚಿಯಿಂದ ಕೆಳಗಿಳಿಸಿದರೆ ಒಂದು ಸಮುದಾಯದವರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಒಂದು ವೇಳೆ ಬದಲಾವಣೆ ಮಾಡಿದರೂ ಸಮರ್ಥ, ವರ್ಚಸ್ಸಿನ ನಾಯಕ ಇನ್ನೊಬ್ಬರಿಲ್ಲ. ಇದರಿಂದ ಪಕ್ಷಕ್ಕೇ ಹಾನಿ. ಹೀಗಾಗಿ ಹೈಕಮಾಂಡ್ ಅಷ್ಟು ಸುಲಭವಾಗಿ ಸಿಎಂ ಬದಲಾವಣೆ ಸಾಧ್ಯತೆ ಕಡಿಮೆ.