ಬೆಂಗಳೂರು (ಜು.22): ರಾಜ್ಯದಲ್ಲಿ ಆಗಸ್ಟ್ ಮೊದಲ ವಾರದಿಂದ ಹಂತಹಂತವಾಗಿ ಶಾಲೆ- ಪಿಯು ಕಾಲೇಜು ಆರಂಭಿಸಲು ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಅಧಿಕೃತ ಆದೇಶ ಹೊರ ಬೀಳುವುದಷ್ಟೇ ಬಾಕಿಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಜ.26ರಿಂದ ಎಲ್ಲಾ ಉನ್ನತ ಶಿಕ್ಷಣ ಕಾಲೇಜುಗಳನ್ನು ಆರಂಭಿಸಲು ಅನುಮತಿ ನೀಡಿರುವ ರಾಜ್ಯ ಸರ್ಕಾರ ಇದರ ಬೆನ್ನಲ್ಲೇ ಆಗಸ್ಟ್ ಮೊದಲ ವಾರದಿಂದ ಹಂತ ಹಂತವಾಗಿ ಶಾಲೆ, ಪಿಯು ಕಾಲೇಜುಗಳನ್ನೂ ಆರಂಭಿಸಲು ತೀರ್ಮಾನಿಸಿದೆ.
ಮೊದಲ ಅಲೆ ತಹಬದಿಗೆ ಬಂದ ಬಳಿಕ ಹಂತ ಹಂತವಾಗಿ ಶಾಲೆ ಆರಂಭಕ್ಕೆ ಅವಕಾಶ ನೀಡಿದ್ದಂತೆ ಈ ಬಾರಿಯೂ ಕೂಡ ಮೊದಲು ಮೊದಲು 10 ಮತ್ತು 12ನೇ ತರಗತಿ, ನಂತರ 8, 9 ಮತ್ತು 11ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿ ಆರಂಭಿಸುವುದು. 5, 6 ಮತ್ತು 7ನೇ ತರಗತಿ ಮಕ್ಕಳಿಗೆ ಮೊದಲು ಶಾಲಾ ಆವರಣದಲ್ಲೇ ವಿದ್ಯಾಗಮ ಆರಂಭಿಸುವುದು. ನಂತರ ಆಗಸ್ಟ್ ಮಾಸಾಂತ್ಯದ ವೇಳೆಗೆ ಕೋವಿಡ್ ಮೂರನೇ ಅಲೆಯ ಲಕ್ಷಣಗಳು ಗೋಚರಿಸದಿದ್ದರೆ ಉಳಿದ 1ರಿಂದ 4ನೇ ತರಗತಿ ಮಕ್ಕಳಿಗೂ ವಿದ್ಯಾಗಮ ಇಲ್ಲವೇ, ಭೌತಿಕ ತರಗತಿಗಳನ್ನೇ ಆರಂಭಿಸಲು ಸರ್ಕಾರ ಲೆಕ್ಕಾಚಾರ ಹಾಕಿಕೊಂಡಿದೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಕಾಲೇಜ್ ಆರಂಭಕ್ಕೆ ಮುಹೂರ್ತ ಫಿಕ್ಸ್: ವಿದ್ಯಾರ್ಥಿಗಳೇ ರೆಡಿಯಾಗಿ....!
ಶಾಲೆ, ಪಿಯು ಕಾಲೇಜುಗಳನ್ನು ಯಾವಾಗಿನಿಂದ ಆರಂಭಿಸಬೇಕೆಂಬ ಬಗ್ಗೆ ವರದಿ ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಾದ ವಿ. ಅನ್ಬುಕುಮಾರ್ ಅವರ ನೇತೃತ್ವದಲ್ಲಿ ರಚಿಸಿರುವ ಕಾರ್ಯಪಡೆಗೆ ಇನ್ನು ಎರಡು- ಮೂರು ದಿನಗಳಲ್ಲಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ಆ ವರದಿ ಆಧರಿಸಿ ಆಗಸ್ಟ್ ಮೊದಲ ವಾರದಿಂದ ಹಂತ ಹಂತವಾಗಿ ಶಾಲೆ, ಪಿಯು ಕಾಲೇಜು ಆರಂಭಿಸಲು ಸರ್ಕಾರದಿಂದ ಅಧಿಕೃತ ದಿನಾಂಕದೊಂದಿಗೆ ಆದೇಶ ಹೊರ ಬೀಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಉನ್ನತ ಮೂಲಗಳು ಕನ್ನಡಪ್ರಭಗೆ ಖಚಿತ ಮಾಹಿತಿ ನೀಡಿವೆ.
ಕಾರ್ಯಪಡೆ ವರದಿ ಸಿದ್ಧ: ಈಗಾಗಲೇ ಆಯುಕ್ತರ ನೇತೃತ್ವದ ಕಾರ್ಯಪಡೆಯು ಸರ್ಕಾರದ ಸೂಚನೆಯಂತೆ ಹಲವು ಶಿಕ್ಷಣ ತಜ್ಞರು, ಪೋಷಕ ಸಂಘಟನೆಗಳು, ಶಿಕ್ಷಕ ಸಂಘಟನೆಗಳು, ಖಾಸಗಿ ಶಾಲಾ ಸಂಘಟನೆಗಳು ಮತ್ತು ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಸದಸ್ಯರೊಂದಿಗೆ ಚರ್ಚಿಸಿ ವರದಿ ಸಿದ್ಧಪಡಿಸಿದೆ. ಎರಡು- ಮೂರು ಸಭೆಗಳಲ್ಲಿ ಸಾಧ್ಯವಾದಷ್ಟೂಬೇಗ ಶಾಲೆ, ಪಿಯು ಕಾಲೇಜುಗಳನ್ನು ಭೌತಿಕವಾಗಿ ಆರಂಭಿಸಬೇಕೆಂಬ ಬಗ್ಗೆ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ. ಹಾಗಾಗಿ ಜು.26 ರಿಂದ ಕಾಲೇಜುಗಳು ಆರಂಭವಾದ ಒಂದು ವಾರ ಕಾಲ ಪರಿಸ್ಥಿತಿ ಅವಲೋಕಿಸಿ ಆಗಸ್ಟ್ ಮೊದಲ ವಾರದಿಂದ ಶಾಲೆ, ಪಿಯು ಕಾಲೇಜುಗಳನ್ನು ಹಂತ ಹಂತವಾಗಿ ಆರಂಭಿಸಬಹುದು ಎಂದು ಶಿಫಾರಸು ಮಾಡಲು ಕಾರ್ಯಪಡೆ ವರದಿ ಸಿದ್ಧಪಡಿಸಿಕೊಂಡಿದೆ ಎಂದು ಇಲಾಖಾ ಮೂಲಗಳು ತಿಳಿಸಿವೆ.
ಪ್ರಾಥಮಿಕ ಶಾಲೆ ಆರಂಭಕ್ಕೆ ಐಸಿಎಂಆರ್ ಗ್ರೀನ್ ಸಿಗ್ನಲ್
- ಕೊರೋನಾ ಕಾರಣ 2020ರ ಮಾಚ್ರ್ನಿಂದ ಶಾಲೆ- ಕಾಲೇಜುಗಳು ಬಂದ್ ಆಗಿದ್ದವು
- ಸೋಂಕು ಕಮ್ಮಿಯಾದ ಕಾರಣ 2021ರ ಜ.1ರಿಂದ ಶಾಲೆ, ಕಾಲೇಜು ಆರಂಭವಾಗಿದ್ದವು
- 8ನೇ ತರಗತಿ ಮೇಲ್ಪಟ್ಟಮಕ್ಕಳಿಗೆ ಪಾಠ ಪ್ರವಚನ ಶಾಲೆ- ಕಾಲೇಜಲ್ಲೇ ಪ್ರಾರಂಭವಾಗಿತ್ತು
- ಮಾಚ್ರ್ನಲ್ಲಿ 2ನೇ ಅಲೆ ಪ್ರಾರಂಭವಾದ ಹಿನ್ನೆಲೆಯಲ್ಲಿ ತರಗತಿ ಬೋಧನೆ ನಿಲ್ಲಿಸಲಾಗಿತ್ತು
4 ತಿಂಗಳ ಬಳಿಕ ಪಿಯು ಕಾಲೇಜು ಆರಂಭ:
ಸರ್ಕಾರ ಶಾಲೆ ಎಲ್ಲಾ ಅಂದುಕೊಂಡಂತೆ ನಡೆದರೆ ನಾಲ್ಕು ತಿಂಗಳ ಬಳಿಕ ಮತ್ತೆ ಶಾಲೆ, ಪಿಯು ಕಾಲೇಜುಗಳು ಪುನಾರಂಭಗೊಳ್ಳಲಿವೆ.
2020ರ ಮಾರ್ಚಲ್ಲಿ ರಾಜ್ಯಕ್ಕೆ ಮೊದಲ ಕೋವಿಡ್ ಕೇಸ್ ದಾಖಲಾಗುತ್ತಲೇ ಶಾಲೆ, ಕಾಲೇಜುಗಳನ್ನು ಸರ್ಕಾರ ಬಂದ್ ಮಾಡಿತ್ತು. ನಂತರ ಆನ್ಲೈನ್, ದೂರದರ್ಶನ, ರೇಡಿಯೋಗಳಲ್ಲಿ ಪಾಠ ಪ್ರಸಾರ ಸೇರಿದಂತೆ ಪರ್ಯಾಯ ಮಾರ್ಗದಲ್ಲಿ ಪಠ್ಯ ಬೋಧನೆಗೆ ಕ್ರಮ ವಹಿಸಿತ್ತು.
ಬಳಿಕ ಕಳೆದ ಡಿಸೆಂಬರ್ ವೇಳೆಗೆ ಕೋವಿಡ್ ಸೋಂಕು ಕಡಿಮೆಯಾಗಿದ್ದರಿಂದ 2021ರ ಜ.1ರಿಂದ ಶಾಲೆ, ಪಿಯು ಕಾಲೇಜುಗಳನ್ನು ಆರಂಭಿಸಿ 8 ರಿಂದ 10ನೇ ತರಗತಿ ಮತ್ತು ಪದವಿ ಪೂರ್ವ ಕಾಲೇಜು ಮಕ್ಕಳಿಗೆ ಭೌತಿಕ ತರಗತಿ ಆರಂಭಿಸಿತ್ತು. 6 ಮತ್ತು 7ನೇ ತರಗತಿ ಮಕ್ಕಳಿಗೆ ಶಾಲಾವರಣದಲ್ಲೇ ವಿದ್ಯಾಗಮ ನಡೆಸಿತ್ತು.
ಇದಾದ ಬಳಿಕ ಮಾಚ್ರ್ನಲ್ಲಿ ಸೋಂಕು ಏರಿಕೆಯಾಗಿ ಎರಡನೇ ಅಲೆ ಶುರುವಾಗುತ್ತಲೇ ಮತ್ತೆ ಶಾಲೆ, ಕಾಲೇಜುಗಳನ್ನು ಸರ್ಕಾರ ಬಂದ್ ಮಾಡಿ ಪರ್ಯಾಯ ಮಾರ್ಗಗಳ ಮೂಲಕ ಪಠ್ಯ ಬೋಧನೆಗೆ ಅವಕಾಶ ನೀಡಿತ್ತು.