Publish Date: Tue, 07 Mar 2023 (08:05 IST)
Updated Date: Tue, 07 Mar 2023 (01:07 IST)
ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಈ ಬಾರಿ ಕಿಚಡಿ ಸರ್ಕಾರ ಬರಲ್ಲ, ಬಿಜೆಪಿ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ ಎಂದು ಆರೋಗ್ಯ ಸಚಿವ ಸುಧಾಕರ್ ತಿರುಗೇಟು ನೀಡಿದರು.
ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಭ್ರಷ್ಟಾಚಾರ ಯಾತ್ರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅಭಿವೃದ್ಧಿ ಮಾಡಿದ್ರೆ 128 ಸ್ಥಾನದಿಂದ 78 ಸ್ಥಾನಕ್ಕೆ ಯಾಕೆ ಬಂದ್ರು? 17 ಮಂತ್ರಿಗಳು ಯಾಕೆ ಸೋತರು? ಲೋಪದೋಷ ಆಗಿರೋದಕ್ಕೆ ಅಲ್ವಾ? ಸಿಎಂ ಆದವರೇ ಸ್ವತಃ ಸೋತರಲ್ಲ.
ಯಾಕೆ ಸೋತ್ರು? ಸಿದ್ದರಾಮಯ್ಯ ಕಲ್ಯಾಣ ಕರ್ನಾಟಕ ಮಾಡಿದ್ರಾ? ನಮ್ಮ ವಿಜಯ ಸಂಕಲ್ಪ ಯಾತ್ರೆಗೆ ಜನ ಉತ್ಸಾಹದಿಂದ ಬರುತ್ತಿದ್ದಾರೆ. ಬಿಜೆಪಿ ಸೋಲಿಸಲು ಕಾಂಗ್ರೆಸ್ನಿಂದ ಸಾಧ್ಯವಿಲ್ಲ ಎಂದು ಹೇಳಿದರು.