Publish Date: Fri, 05 Jul 2019 (20:43 IST)
Updated Date: Fri, 05 Jul 2019 (20:44 IST)
ಕರ್ನಾಟಕದ ಪಾಲಿಗಂತೂ ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ಅತ್ಯಂತ ಕೆಟ್ಟದಾಗಿರುವ ಬಜೆಟ್ ಆಗಿದೆ. ಹೀಗಂತ ಡಿಸಿಎಂ ದೂರಿದ್ದಾರೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರದ ಬಜೆಟ್ ನಲ್ಲಿ ರಾಜ್ಯಕ್ಕೆ ಹೇಳಿಕೊಳ್ಳುವಂತಹ ಯೋಜನೆಗಳನ್ನು ಪ್ರಕಟಮಾಡಿಲ್ಲ. ರಾಜ್ಯದ ಪಾಲಿಗೆ ನಿರಾಶಾದಾಯಕವಾಗಿದ್ದು, ಕೆಟ್ಟ ಬಜೆಟ್ ಇದಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಟೀಕೆ ಮಾಡಿದ್ರು.
ರಾಜಕೀಯ ಬದುಕಿನಲ್ಲಿ ಇಂಥ ಕೆಟ್ಟ ಬಜೆಟ್ ಕಂಡಿರಲಿಲ್ಲ. ಗುಣಮಟ್ಟದ ಶಿಕ್ಷಣ, ದಲಿತರು ಮತ್ತು ಅಲ್ಪಸಂಖ್ಯಾತರ ಬಗ್ಗೆ ಒಂದೇ ಒಂದು ಶಬ್ದ ಹೇಳಿಲ್ಲ ಎಂದ್ರು.
ನಿರ್ಮಲಾ ಸೀತಾರಾಂ ಅವರಿಗೆ ಅನುಭವದ ಕೊರತೆ ಇದೆ. ಅಧಿಕಾರಿಗಳು ಸರಿಯಾದ ಮಾಹಿತಿ ಹಾಗೂ ಮಾರ್ಗದರ್ಶನ ಮಾಡಿಲ್ಲ ಅಂತ ಡಿಸಿಎಂ ದೂರಿದ್ರು.