Publish Date: Fri, 05 Jul 2019 (15:16 IST)
Updated Date: Fri, 05 Jul 2019 (15:26 IST)
ಕೇಂದ್ರ ಬಜೆಟ್ 2019-20 ರಲ್ಲಿ ಬಜೆಟ್ ಮಂಡಿಸಿರುವ ಸಚಿವೆ ನಿರ್ಮಲಾ ಸೀತಾರಾಮನ್ ಬಡ, ಮಧ್ಯಮ ವರ್ಗದ ಜನರಿಗೆ ಸಿಹಿಗಿಂತ ಕಹಿಯೇ ಹೆಚ್ಚು ನೀಡಿದ್ದಾರೆ. ಇದು ಅಗತ್ಯ ಹಾಗೂ ಅನಿವಾರ್ಯ ಎಂದೂ ತಮ್ಮ ಯೋಜನೆಗಳ ಮೂಲಕ ತೋರಿಸಿಕೊಡಲು ಯತ್ನಿಸಿದ್ದಾರೆ.
ಇನ್ನುಮುಂದೆ ಆದಾಯ ತೆರಿಗೆ ಪಾವತಿಸಲು ಪಾನ್ ಕಾರ್ಡ್ ಕಡ್ಡಾಯ ನಮೂದಿಸಬೇಕಾದ ಅಗತ್ಯವಿಲ್ಲ.
ಚಿನ್ನ, ಡೀಸೆಲ್ ಮೇಲಿನ ಸೆಸ್ ಏರಿಕೆ ಮಾಡಲಾಗಿದೆ.
ಮಹಿಳಾ ಸಬಲೀಕರಣಕ್ಕೆ ನಾರಿ ಟು ನಾರಾಯಣಿ ಮಂತ್ರ ಜಪ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ 26 ಸಾವಿರ ಕೋಟಿ ರೂ. ಮಂಜೂರು.
ಒಂದು ದೇಶ, ಒಂದು ಕಾರ್ಡ್ ಯೋಜನೆಯನ್ನು ಜಾರಿಗೆ.
ಬ್ಯಾಂಕ್ ಖಾತೆಯಿಂದ 1 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತ ತೆಗೆದರೆ ಶೇಕಡ 2 ತೆರಿಗೆ.
ಶಸ್ತ್ರ ಚಿಕಿತ್ಸಾ ಉಪಕರಣಗಳಿಗೆ ತೆರಿಗೆ ವಿನಾಯಿತಿ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್ ಏರಿಕೆ ಮಾಡಲಾಗಿದೆ.
ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ 1.25 ಲಕ್ಷ ರೂ. ಸಬ್ಸಿಡಿ ಘೋಷಣೆ.
ಮೂಲ ಸೌಕರ್ಯಕ್ಕೆ 5 ಲಕ್ಷ ಕೋಟಿ ರೂಪಾಯಿ ಮೀಸಲು.
5 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಹೊಂದಿದವರಿಗೆ ತೆರಿಗೆ ಇಲ್ಲ.
ಸ್ಟಾರ್ಟ್ ಅಪ್ ಕಂಪನಿಗಳಿಗೆ ಐಟಿ ಇಲಾಖೆ ಪರಿಶೀಲನೆಯಿಂದ ವಿನಾಯಿತಿ.
17 ಪ್ರವಾಸಿ ಕೇಂದ್ರವನ್ನು ವಿಶ್ವದರ್ಜೆಗೆ ಏರಿಕೆಗೆ ನಿರ್ಧಾರ.
ಪ್ರತಿ ಮನೆಗೂ ಕುಡಿಯುವ ನೀರು ಪೂರೈಕೆಗೆ "ಹರ್ ಘರ್ ಜಲ್' ಯೋಜನೆ ಆರಂಭ.
ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ದೇಶಾದ್ಯಂತ 1.25 ಲಕ್ಷ ಕಿಲೋ ಮೀಟರ್ ರಸ್ತೆ ಮೇಲ್ದರ್ಜೆಗೆ.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 2021 ವೇಳೆಗೆ 1.95 ಕೋಟಿ ಮನೆಗಳ ನಿರ್ಮಾಣ ಗುರಿ.
ಮೀನುಗಾರಿಕೆ ಕ್ಷೇತ್ರಕ್ಕೆ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಜಾರಿ.
ಅನಿವಾಸಿ ಭಾರತೀಯರಿಗೂ ಆಧಾರ್ ಕಾರ್ಡ್ ನೀಡುವ ಯೋಜನೆ.
Jagadeesh
Publish Date: Fri, 05 Jul 2019 (15:16 IST)
Updated Date: Fri, 05 Jul 2019 (15:26 IST)