ಕೊರೊನಾ ವೈರಸ್ ರ್ಯಾಪಿಡ್ ಪರೀಕ್ಷೆ ನಡೆಸುವ ಕಿಟ್ ಗಳನ್ನು ಬಿಜೆಪಿ ಸಂಸದರೊಬ್ಬರು ತಮ್ಮ ಕಾರಿನಲ್ಲಿ ಸಾಗಿಸಿದ್ದಾರೆ.
ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್ )ಯ ಕೋವಿಡ್ ಲ್ಯಾಬ್ ನಲ್ಲಿ ಜಿಲ್ಲೆಗೆ ಬಂದಿರುವ ಕಾರ್ಮಿಕರು ಸೇರಿ ವಲಸಿಗರಿಗೆ ರ್ಯಾಪಿಡ್ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ತುರ್ತಾಗಿ ಅಗತ್ಯವಿದ್ದ ಕಿಟ್ (ರಾಸಾಯನಿಕ ಪದಾರ್ಥ)ಗಳನ್ನು ಸ್ವತಃ ತಮ್ಮ ಕಾರಿನಲ್ಲಿ
ಸಂಸದ ಡಾ. ಉಮೇಶ್ ಜಾಧವ್ ಅವರು ಬೆಂಗಳೂರಿನಿಂದ ಕಲಬುರಗಿ ತೆಗೆದುಕೊಂಡು ಬಂದಿದ್ದಾರೆ.
ಬೆಂಗಳೂರಿನ ರಾಷ್ಟ್ರೀಯ ವೈರಾಣು ಪ್ರಯೋಗಾಲಯದಿಂದ ಜಿಮ್ಸ್ ಗೆ ತರಲಾಗುತ್ತಿದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮಂಜುಗಡ್ಡೆ ( ಹಾರ್ಡ್ ಐಸ್)ಯಲ್ಲಿಟ್ಟು , 16 ಗಂಟೆಯೊಳಗೆ ಕೊಂಡೊಯ್ಯಲೇಬೇಕಾಗಿದ್ದು, ಈ ಕಾರ್ಯಕ್ಕೆ ಸಂಸದ ಜಾಧವ್ ಅವರೇ ಮುಂದಾಗಿದ್ದಾರೆ.
ಬೆಂಗಳೂರಿಗೆ ತೆರಳಿದ್ದ ಲೋಕಸಭಾ ಸದಸ್ಯ ಜಾಧವ್ ಅವರಿಗೆ ಜಿಮ್ಸ್ ನಿಂದ ಅಧಿಕಾರಿಗಳು ಪೋನ್ ಕರೆ ಮಾಡಿ ಮನವಿ ಮಾಡಿದರು. ತುರ್ತು ಸಂದರ್ಭವನ್ನು ಅರಿತ ಸಂಸದರು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್,ನವದೆಹಲಿ) ಕಚೇರಿಗೆ ಕರೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೊಂದಿಗೆ ಮಾತಾನಾಡಿ, ಎನ್ ಐವಿ ವೈದ್ಯರಿಗೆ ನಿರ್ದೇಶನ ಕೊಡಿಸಿದರು. ಬಳಿಕ ಕಿಟ್ ಗಳನ್ನು ಸಂಸದರಿಗೆ ಹಸ್ತಾಂತರ ಮಾಡಲಾಯಿತು.