Publish Date: Sat, 16 May 2020 (09:26 IST)
Updated Date: Sat, 16 May 2020 (09:28 IST)
ಮುಂಬೈ: ಸುಮಾರು ಎರಡು ತಿಂಗಳಿನಿಂದ ಟ್ರೈನಿಂಗ್ ಇಲ್ಲದೇ ಜಡಗಟ್ಟಿದ ದೇಹಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಚುರುಕು ಮುಟ್ಟಿಸುವ ಕೆಲಸ ಶುರು ಮಾಡಿದ್ದಾರೆ.
ಇನ್ನೇನು ಲಾಕ್ ಡೌನ್ ಕಟ್ಟು ನಿಟ್ಟಿನ ನಿಯಮಗಳು ಸಡಿಲಿಕೆಯಾಗುತ್ತಿದೆ. ಬಿಸಿಸಿಐ ಸರ್ಕಾರದ ಒಪ್ಪಿಗೆ ಸಿಕ್ಕರೆ ಆಟಗಾರರಿಗೆ ನೆಟ್ ಪ್ರಾಕ್ಟೀಸ್ ಗೆ ಅವಕಾಶ ಕಲ್ಪಿಸಲಿದೆ.
ಈ ನಡುವೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಮನೆಯ ಲಾನ್ ನಲ್ಲೇ ದೈಹಿಕ ಕಸರತ್ತು ಶುರು ಮಾಡಿಕೊಂಡಿದ್ದಾರೆ. ದೈಹಿಕ ವ್ಯಾಯಾಮಕ್ಕೆ ಒತ್ತು ನೀಡಿರುವ ಕೊಹ್ಲಿ ರನ್ನಿಂಗ್ ಮಾಡುವ ಮೂಲಕ ಮತ್ತೆ ಟ್ರೈನಿಂಗ್ ಗೆ ಸಿದ್ಧವಾಗುತ್ತಿರುವ ಸುಳಿವು ನೀಡಿದ್ದಾರೆ.