Publish Date: Tue, 10 Aug 2021 (16:56 IST)
Updated Date: Tue, 10 Aug 2021 (17:01 IST)
ವಿ. ಸೋಮಣ್ನಣನವರು ಈ ಹಿಂದೆ ಹಾಸನದ ಶಾಸಕ ಪ್ರೀತಂ ಗೌಡರಿಗೆ ಅವನಿನ್ನು ಚಿಕ್ಕವನು ರಾಜಕೀಯದ ಬಗ್ಗೆ ತೀಳಿದುಕೊಳ್ಳುವುದು ತುಂಬಾನೆ ಇದೆ ಎಷ್ಟೇಯಾಗಲಿ ನಾವು ರಾಜಕೀಯಕ್ಕೆ ಬಂದ ನಂತರ ಬಂದವನು ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಪ್ರೀತಂ ಗೌಡ ಮಾತನಾಡಿ, ನನ್ನ ನಿಲುವು ಯಾವತ್ತೂ ಬದಲಾಗಿಲ್ಲ. ಈ ಬಗ್ಗೆ ನಾನು ಪ್ರಶ್ನೆ ಮಾಡಿದ್ದು ನೂರಕ್ಕೆನೂರು ಸತ್ಯ. ಒಂದು ಸಲ ಗೆದ್ದರೆನೇ ಐದು ಬಾರಿ ಗೆಲ್ಲೋದು ಸೋಮಣ್ಣನವರು ಮೇಲೆ ಇದ್ದಾರೆ. ಒಂದು ಸಲ ಗೆದ್ದವರಿಗೆ ಒಂದೇ ವೋಟು. ಆರು ಬಾರಿ ಗೆದ್ದವರಿಗೂ ಒಂದೇ ವೋಟು.
ನಾನು ರಾಜಕಾರಣ ಮಾಡೋಕೆ ಬಂದವನು. ಕಬ್ಬ
ನ್ ಪಾರ್ಕ್, ಲಾಲ್ ಬಾಗ್ ನೋಡೋಕೆ ಬಂದಿಲ್ಲ. ಮಾತನಾಡಬೇಕಾದರೆ ಗೌರವ ಕೊಟ್ಟು ಗೌರವ ಪಡೆಯಬೇಕು. ಹಿರಿಯರು ಮಾರ್ಗದರ್ಶನ ಮಾಡಲಿ ಅದು ಬಿಟ್ಟು ಬೇರೆಯವರ ಬಗ್ಗೆ ಮಾತನಾಡುವುದು ಬೇಡ ಎಂದು ವಾಗ್ದಾಳಿ ನಡೆಸಿದರು.