Publish Date: Mon, 01 Jun 2020 (16:02 IST)
Updated Date: Mon, 01 Jun 2020 (16:04 IST)
ಏಕಾಏಕಿ ಸುರಿದ ಅಕಾಲಿಕ ಮಳೆ ಮತ್ತು ಬಿರುಗಾಳಿಗೆ ಅಪಾರವಾಗಿ ಹಾನಿಗೊಳಗಾದ ಪ್ರದೇಶಕ್ಕೆ ಬಿಜೆಪಿ ಶಾಸಕರು ಭೇಟಿ ನೀಡಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನಲ್ಲಿ ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಗಾವರಾಳ ಗ್ರಾಮದ ರೈತ ಹಂಚಾಳಪ್ಪ ರಾಮಪ್ಪ ಕೊಪ್ಪದ ಅವರ ಜಮೀನಿನಲ್ಲಿ ಬೆಳೆದ ಬಾಳೆ ಬೆಳೆ ನಾಶವಾಗಿದೆ. ಬೆಣಕಲ್ಲ ಗ್ರಾಮದ ರೈತ ದೊಡ್ಡಪ್ಪ ಹುಡೆದ ಅವರ ಹೋಲದಲ್ಲಿ ಬೆಳೆದಿದ್ದ ಕಲ್ಲಂಗಡಿ ಬೆಳೆ ಹಾಳಾಗಿದ್ದು ಅಪಾರ ಪ್ರಮಾಣದಲ್ಲಿ ನಾಶವಾಗಿದೆ.
ಯಲಬುರ್ಗಾ ಶಾಸಕ ಹಾಲಪ್ಪ ಆಚಾರ, ಮಳೆ ಮತ್ತು ಬಿರುಗಾಳಿಗೆ ಹಾಳಾದ ಜಮೀನಿಗೆ ಭೇಟಿನೀಡಿ ರೈತರಿಗೆ ಸಾಂತ್ವಾನ ಹೇಳಿದರು. ಅಧಿಕಾರಿಗಳು ಬೆಳೆ ಹಾನಿಯನ್ನು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದಾರೆ.