ಜೈನ ಮುನಿ ಹತ್ಯೆ ವಿಚಾರವಾಗಿ ನನ್ನ ನೇತೃತ್ವದಲ್ಲಿ ಕಮಿಟಿ ಆಗಿಲ್ಲ.ಆದ್ರೆ ಜೈನ ಮುನಿಗಳ ಹತ್ಯೆ ಬಗ್ಗೆ ವರದಿ ಪಡೆದಿದ್ದೇನೆ.ಅವರ ಪೂರ್ವಾಶ್ರಮದ 40 ಎಕರೆ ಜಮೀನಿದೆ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೇಳಿದ್ದಾರೆ.
ಎಲ್ಲಾ ತ್ಯಾಗ ಮಾಡಿದವರು ಬಡ್ಡಿಗೆ ದುಡ್ಡು ಬಿಟ್ಟಿದ್ದಾರೆ ಅನ್ನೋದು ಹಾಸ್ಯಾಸ್ಪದ.ನಾನು ಸ್ವತಃ ಚಿಕ್ಕೋಡಿಗೆ ಹೋಗಿದ್ದೆ.ಅಲ್ಲಿನ ಜನರಿಗೆ ಹೀಗೆ ಸ್ಟೇಟ್ಮೆಂಟ್ ಕೊಡಬೇಕು ಅಂತ ಒತ್ತಡ ಹಾಕಿದ್ದಾರೆ.ಇದೆಲ್ಲ ನೋಡಿದ್ರೆ ಪೊಲೀಸರು ಯಾರದ್ದೋ ಒತ್ತಡಕ್ಕೆ ಬಲಿಯಾಗಿದ್ದಾರೆ.ಹಾಗಾಗಿ ಸಿಬಿಐ ತನಿಖೆ ಮಾಡಬೇಕು.ಸರ್ಕಾರ ಇಬ್ಬರು ಆರೋಪಿಗಳ ಹೆಸರನ್ನ ಹೇಳಲಿಲ್ಲ.ನಾರಾಯಣಪಾಳಿ ಒಬ್ಬರ ಹೆಸರನ್ನ ಮಾತ್ರ ಹೇಳಿದ್ದಾರೆ.ಸ್ವಾಮೀಜಿ ಹಣಕಾಸು ವ್ಯವಹಾರ ಮಾಡಿದ್ದಾರೆ ಅಂತ ಹೇಳಿದ್ದಾರೆ.ಇದು ಸತ್ಯಕ್ಕೆ ದೂರವಾದ್ದದ್ದು ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೇಳಿದ್ದಾರೆ.