Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಜ್ಯದ ಬಜೆಟ್ ಮಂಡನೆಯಿಂದಾಗಿ ಮದ್ಯ ಪ್ರಿಯರಿಗೆ ಬೃಹತ್ ಶಾಕ್

ರಾಜ್ಯದ ಬಜೆಟ್ ಮಂಡನೆಯಿಂದಾಗಿ ಮದ್ಯ ಪ್ರಿಯರಿಗೆ ಬೃಹತ್ ಶಾಕ್
bangalore , ಸೋಮವಾರ, 10 ಜುಲೈ 2023 (15:51 IST)
ರಾಜ್ಯದ ಬಜೆಟ್ ಮಂಡನೆಯಿಂದ ಮದ್ಯ ಪ್ರೀಯರಿಗೆ ಶಾಕ್ ಎದುರಾಗಿದೆ.ಅಧಿಕವಾಗಿ ಮದ್ಯ ಮಾರಾಟ ಆಗುತ್ತಿರುವುದನ್ನು ಗಮನಿಸಿದ ಸರಕಾರ ಮದ್ಯದ ಮೇಲೆ ತೆರಿಗೆ ಬರೆ ಎಳೆದಿದೆ. ಕಳೆದ ಎರಡೂ ಮೂರು ವರ್ಷದ ನಂತರ ಇದೀಗ  ಮದ್ಯ ಪ್ರಿಯರಿಗೆ ಕೊಂಚ ಬೇಸರ ತಂದೊಡ್ಡಿದೆ.
 
ಮದ್ಯ ಪ್ರಿಯರಿಗೆ ಮದ್ಯದ ಬೆಲೆಯನ್ನು ಶೇಕಡ 20% ರಷ್ಟು ಹೆಚ್ಚಳಕ್ಕೆ ನಿರ್ಧಾರ  ಮಾಡಿದ್ದು, ಬಾರ್ ಮಾಲೀಕರ ಮೇಲೆ ಒತ್ತಾಯ ಮಾಡಲಾಗಿದೆ.ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಯವರು ಇದ್ದಾಗ 20% ಲಾಭಾಂಶ ಇತ್ತು .ಆದ್ರೆ ಇದೀಗ ೧೦ %  ಮಾತ್ರ ಲಾಭಾಂಶ ಸಿಗತ್ತಿದೆ .
 
ಇವತ್ತಿನ ದುಬಾರಿ ದುನಿಯದಲ್ಲಿ ನಮಗೆ ಲಾಭದ ಮೇಲೆ ಜೀವನ ನಡೆಸಲು ಕಷ್ಟ .ನಮಗೆ 20% ಲಾಭಾಂಶವನ್ನು ಕೊಡಿ .ಬಾರ್ ಬಾಡಿಗೆ, ಮತ್ತು ಕೆಲಸಗಾರರು ಸಂಬಳ, ಜೊತೆಗೆ ನಿರ್ವಹಣಾ ಹೆಚ್ಚಳದಿಂದ ಬಾರ್ ನಡೆಸುವುದು ಕಷ್ಟ ವಾಗುತ್ತಿದೆ.ಹೀಗಾಗಿ ನಮಗೆ 10% ಅಷ್ಟೇ ಲಾಭ ನೀಡುತ್ತಿದೆ ಇದನ್ನು 20% ಹೆಚ್ಚಳ ಮಾಡಿ ಎಂದು ಸರ್ಕಾರಕ್ಕೆ ಬಾರ್ ಮಾಲೀಕರಯ ಒತ್ತಾಯ ಮಾಡಿದ್ದಾರೆ.ಬಿಯರ್ ಮೇಲಿನ 10% ಮದ್ಯ ( ಲಿಕ್ಕರ್ ) 18 ಸ್ಲಬ್ ಗಳ ಮೇಲೆ 20% ಹೆಚ್ಚಳವಾಗಿದೆ.ಒಟ್ಟು 36 ಸಾವಿರ ಕೋಟಿ ಆದಾಯ ನಿರೀಕ್ಷೆಯಲ್ಲಿ ಸರ್ಕಾರ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಾ ಜೈನ ಮುನಿಗಳಿಗೂ ರಕ್ಷಣೆ ಕೊಡಬೇಕು : ಸುನಿಲ್ ಕುಮಾರ್