Publish Date: Wed, 25 Oct 2023 (12:06 IST)
Updated Date: Wed, 25 Oct 2023 (10:09 IST)
ಬೆಂಗಳೂರು: ರಾಜ್ಯಾಧ್ಯಕ್ಷ ನೇಮಕ ಕುರಿತಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದ ಮಾಜಿ ಸಿಎಂ ಸದಾನಂದ ಗೌಡರಿಗೆ ವರಿಷ್ಠರಿಂದ ಬುಲಾವ್ ಬಂದಿದೆ.
ಇಂದು ದೆಹಲಿಯಲ್ಲಿ ಸದಾನಂದ ಗೌಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ. ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಸದಾನಂದ ಗೌಡರು ಕೆಲವು ದಿನಗಳ ಮೊದಲು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಇದರ ಬೆನ್ನಲ್ಲೇ ಅವರಿಗೆ ವರಿಷ್ಠರಿಗೆ ಬುಲಾವ್ ನೀಡಿರುವುದು ವಿಶೇಷವಾಗಿದೆ.
ರಾಜ್ಯ ಬಿಜೆಪಿಗೆ ಶೋಭಾ ಕರಂದ್ಲಾಜೆ ಅವರನ್ನು ನೇಮಿಸುವ ವಿಚಾರದಲ್ಲಿ ಸದಾನಂದ ಗೌಡರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಇದರ ನಡುವೆ ತಮಿಳುನಾಡಿನಲ್ಲಿ ಬಿಜೆಪಿ-ಡಿಎಂಕೆ ನಡುವಿನ ವೈಮನಸ್ಯ ಸರಿಪಡಿಸಲು ರಚಿಸಿರುವ ಸಮಿತಿಯಲ್ಲಿ ಸದಾನಂದ ಗೌಡರೂ ಒಬ್ಬರು. ಹೀಗಾಗಿ ಈ ಎಲ್ಲಾ ವಿಚಾರವನ್ನು ಚರ್ಚಿಸಲು ವರಿಷ್ಠರು ಕರೆ ನೀಡಿದ್ದಾರೆ ಎನ್ನಲಾಗಿದೆ.