Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅನ್ಯಧರ್ಮೀಯರಿಗೆ ಧಾರ್ಮಿಕ ಸ್ವಾತಂತ್ರ್ಯ, ಹಿಂದೂಗಳಾದರೆ ಅರೆಸ್ಟ್ ಮಾಡಿಸುವ ಸಿದ್ದರಾಮಯ್ಯ: ಬಿಜೆಪಿ ಆರೋಪ

Siddaramaiah

Krishnaveni K

ಬೆಂಗಳೂರು , ಸೋಮವಾರ, 16 ಸೆಪ್ಟಂಬರ್ 2024 (13:13 IST)
ಬೆಂಗಳೂರು: ಅನ್ಯಧರ್ಮೀಯರು ಏನೇ ಮಾಡಿದರೂ ಅದನ್ನು ಧಾರ್ಮಿಕ ಸ್ವಾತಂತ್ರ್ಯ ಎನ್ನುವ ಸಿದ್ದರಾಮಯ್ಯ ಅದೇ ಕೆಲಸವನ್ನು ಹಿಂದೂಗಳು ಮಾಡಿದರೆ ಪೊಲೀಸರ ಮೂಲಕ ಅರೆಸ್ಟ್ ಮಾಡಿಸಿ ದೌರ್ಜನ್ಯವೆಸಗುತ್ತಾರೆ ಎಂದು ಕರ್ನಾಟಕ ಬಿಜೆಪಿ ಆರೋಪಿಸಿದೆ.

ಮಂಡ್ಯದ ನಾಗಮಂಗಲದಲ್ಲಿ ನಡೆದ ಕೋಮುಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಈಗ ರಾಜ್ಯ ಬಿಜೆಪಿ ಘಟಕ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದೆ. ನಿನ್ನೆ ರಾತ್ರೋರಾತ್ರಿ ಪಾಂಡವಪುರದ ಆರ್ ಎಸ್ಎಸ್ ಕಾರ್ಯಕರ್ತರ ಮನೆಗೆ ನುಗ್ಗಿ ಅರೆಸ್ಟ್ ಮಾಡಿರುವುದಕ್ಕೆ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಅನ್ಯಧರ್ಮೀಯರು ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಯಥೇಚ್ಛವಾಗಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಿದರೂ ಸುಮ್ಮನೆ ಬಾಯಿ ಮುಚ್ಚಿಕೊಳ್ಳುವ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ, ಹಿಂದೂಗಳು ಶಾಂತಿಯುತ ಪ್ರತಿಭಟನೆ ಮಾಡಲು ಮುಂದಾದರೆ ದೇವರನ್ನೇ ಬಂಧಿಸುವಷ್ಟರ ಮಟ್ಟಿಗೆ ದರ್ಪ ಮೆರೆಯುತ್ತಿದೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ದರ್ಪ ಕೆಲವೇ ದಿನಗಳಲ್ಲಿ ಅಂತ್ಯವಾಗುವ ಕಾಲ ಬಂದಿದೆ’ ಎಂದಿದೆ.

ಅನ್ಯಧರ್ಮೀಯರು ಏನೇ ಮಾಡಿದರೂ ಅದನ್ನು ಸಿದ್ದರಾಮಯ್ಯ ಅದು ಅವರ ಧಾರ್ಮಿಕ ಸ್ವಾಂತ್ರ್ಯ ಕಣ್ರೀ ಎಂದು ಸಮರ್ಥಿಸುತ್ತಾರೆ. ಆದರೆ ಹಿಂದೂಗಳು ಮಾಡಿದರೆ ಇದು ಕಾನೂನು ಉಲ್ಲಂಘನೆ ಅರೆಸ್ಟ್ ಮಾಡ್ರೀ ಎಂದು ಆದೇಶ ಕೊಡುತ್ತಾರೆ ಎಂದು ಬಿಜೆಪಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿಗೆ ನಾಗಮಂಗಲ ಮಾತ್ರ ಕಾಣುತ್ತಾ, ಮುನಿರತ್ನ ಕಾಣಲ್ವಾ: ಪ್ರಿಯಾಂಕ್ ಖರ್ಗೆ ಟಾಂಗ್