Publish Date: Sat, 04 Jan 2020 (13:56 IST)
Updated Date: Sat, 04 Jan 2020 (13:57 IST)
ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿರೋರು ಸಚಿವರಾಗೋಕೆ ಇನ್ನೂ ಕೆಲವು ದಿನಗಳು ಕಾಯಲೇಬೇಕು.
ಸಚಿವ ಸಂಪುಟ ವಿಸ್ತರಣೆಗೆ ಆಗಾಗ್ಗೆ ದಿನ ನಿಗದಿ ಮಾಡುತ್ತಲೇ ಇರೋ ಪಕ್ಷದ ಮುಖಂಡರು ಇದೀಗ ಹೈಕಮಾಂಡ್ ನತ್ತ ನೋಡುವಂತಾಗಿದೆ.
ಶೀಘ್ರದಲ್ಲಿ ಅಮಿತ್ ಷಾ ಅವರನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ಮಾಡಲಿದ್ದಾರೆ. ಆ ಭೇಟಿಯಲ್ಲಿ ಸಂಪುಟ ವಿಸ್ತರಣೆ ಕುರಿತು ಸುದೀರ್ಘವಾಗಿ ಚರ್ಚೆ ನಡೆದು ಅಂತಿಮಗೊಳಿಸಲಾಗುತ್ತಿದೆ ಎನ್ನಲಾಗುತ್ತಿದೆ.
ಜನೇವರಿ ಅಂತ್ಯದೊಳಗೆ ರಾಜ್ಯದ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಬಹುತೇಕ ಪೂರ್ಣಗೊಳ್ಳಲಿದೆ ಅನ್ನೋ ಮಾತುಗಳು ಕೇಳಿಬರತೊಡಗಿವೆ.