Publish Date: Thu, 28 Nov 2019 (19:28 IST)
Updated Date: Thu, 28 Nov 2019 (19:31 IST)
ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ಸೇರ್ಪಡೆ ವಿಷಯ ಕುರಿತು ಭಾರೀ ಪರ – ವಿರೋಧ ಚರ್ಚೆ ಮತ್ತೆ ಶುರುವಾಗಿದೆ.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗೆ ಬಿಜೆಪಿ ಸೇರಲು ದೊಡ್ಡವರು ಆಫರ್ ನೀಡಿದ್ದರು ಎನ್ನೋ ವಿಚಾರಕ್ಕೆ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಗುಡುಗಿದ್ದಾರೆ.
ಲಕ್ಷ್ಮಿ ಹೆಬ್ಬಾಳಕರ್ ಯಾವಾಗ ಏನು ಮಾತನಾಡುತ್ತಾರೆ ಅನ್ನೋದು ಅವರಿಗೆ ಗೊತ್ತಿಲ್ಲ. ಅವರೇ ನಮ್ಮನ್ನು ಕೇಳುತ್ತಿದ್ದರು. ಬಿಜೆಪಿಗೆ ಯಾವಾಗ ಹೋಗುತ್ತಿರಿ ಹೇಳಿ? ನಾನು ಬರ್ತೀನಿ ಅಂತ ಕೇಳ್ತಿದ್ದರು.
ನಾನು ಆಗ ನಮ್ಮ ಕ್ಷೇತ್ರದ ಅಭಿವೃದ್ಧಿ ಮಾಡುವುದಿದೆ. ನೀವು ಬನ್ನಿ ಇಲ್ಲ ಬಿಡಿ. ನಾನಂತೂ ಬಿಜೆಪಿಗೆ ಹೋಗ್ತಿನಿ ಅಂತ ಹೇಳ್ತಿದ್ದರು.
ಆಗ ಬಿ.ಎಸ್. ಯಡಿಯೂರಪ್ಪನವರೇ ಒಂದು ಹೇಳಿಕೆ ಕೊಟ್ಟಿದ್ದರು. ನಿಮಗೊಸ್ಕರವೇ ಸದ್ಯ ಜಗಳ ಹತ್ತಿದೆ. ನೀವು ಬಿಜೆಪಿಗೆ ಬಂದರೆ ನಿಮ್ಮವರು ಹದಿನಾರು ಜನರು ಬರುವದಿಲ್ಲ. ಆದರೆ ನಮ್ಮವರು ಇಪ್ಪತ್ತು ಜನ ಓಡಿ ಹೋಗುತ್ತಾರೆ ಅಂದಿದ್ದರಂತೆ.
ಹೀಗಂತ ನಾನು ಮಾಧ್ಯಮಗಳ ಮೂಲಕ ನೋಡಿದ್ದೀನಿ ಅನ್ನೋ ಮೂಲಕ ಲಕ್ಷ್ಮಿ ಹೆಬ್ಬಾಳಕರ್ ಗೆ ಟಾಂಗ್ ಕೊಟ್ಟಿದ್ದಾರೆ ಮಹೇಶ ಕುಮಠಳ್ಳಿ.