Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾಗ್ಯಲಕ್ಷ್ಮಿ ಯೋಜನೆ: ಮಳೆಯಲ್ಲೂ ಅಧಿಕಾರಿಗಳ ಬೆವರಿಳಿಸಿದ ಪಾಲಕರು

ಭಾಗ್ಯಲಕ್ಷ್ಮಿ ಯೋಜನೆ: ಮಳೆಯಲ್ಲೂ ಅಧಿಕಾರಿಗಳ ಬೆವರಿಳಿಸಿದ ಪಾಲಕರು
ಮಂಡ್ಯ , ಮಂಗಳವಾರ, 6 ಆಗಸ್ಟ್ 2019 (14:22 IST)
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೋಸಿ ಹೋದ ಸಾರ್ವಜನಿಕರು  ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ  ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ  ಅಂಗನವಾಡಿ ಕೇಂದ್ರದಲ್ಲಿ ಹೋಬಳಿಯ ಎಲ್ಲಾ ಪಲಾನುಭಾವಿಗಳಿಗೆ ಬಾಂಡ್ ವಿತರಿಸುವುದಾಗಿ ತಿಳಿಸಲಾಗಿತ್ತು. ಎಲ್ಲರೂ ಮಕ್ಕಳೊಂದಿಗೆ ಅಂಗನವಾಡಿ ಕೇಂದ್ರಕ್ಕೆ ಬೆಳಗ್ಗೆ 9 ಗಂಟೆಗೆ ಹಾಜರಾಗಬೇಕು ಎಂದು ಅಧಿಕಾರಿಗಳು ತಿಳಿಸಿದ್ರು.

ಆದರೆ ಜಿಟಿ ಜಿಟಿ ಸುರಿಯುತ್ತಿರೋ ಮಳೆಯಲ್ಲಿಯೋ ಮಕ್ಕಳೊಂದಿಗೆ ತಾಯಿ, ಮಕ್ಕಳು ಬಂದಿದ್ದಾರೆ. ಆದರೆ ಸಕಾಲಕ್ಕೆ ಅಧಿಕಾರಿಗಳು ಬಂದು ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ಮಾಡಿಲ್ಲ.

ಅಧಿಕಾರಗಳನ್ನು ಪೋನ್ ಮೂಲಕ ಸಂಪರ್ಕಿಸಿದಾಗ  ಬೇಜವ್ದಾರಿ ಉತ್ತರ ನೀಡಿದ್ದಾರೆ. ನೀವೇನು ನಮಗೆ ಸಂಬಳ ಕೊಡುವುದಿಲ್ಲ. ನಾವು ಬರುವವರೆಗೂ ಕಾಯಿರಿ. ಇಲ್ಲವಾದರೆ ನೀವು ಏನಾದ್ರು ಮಾಡಿಕೊಳ್ಳಿ ಎಂದು ಉಡಾಫೆ  ಉತ್ತರ ನೀಡಿದ್ದಾರೆ ಅಂತ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೇಜಬ್ದಾರಿ ಅಧಿಕಾರಿಗಳನ್ನು ಕೆಲಸದಿಂದ ತೆಗೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಡೆಂಗ್ಯುಗೆ ಶಾಲಾ ಬಾಲಕಿ ಬಲಿ, ತಂಗಿ ಗಂಭೀರ