Webdunia - Bharat's app for daily news and videos

Install App

ಟೆಂಡರ್ ಕರೆಯುವ ಮುನ್ನವೇ ಕಾಮಗಾರಿ ಪೂರೈಸಿದ ಬಿಬಿಎಂಪಿ!

Webdunia
ಬುಧವಾರ, 11 ಆಗಸ್ಟ್ 2021 (22:01 IST)
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ರಸ್ತೆಗಳ ಮೂಲಭೂತ ಸೌಕರ್ಯಗಳ ಇಲಾಖೆಯ ಅಂಗ ಸಂಸ್ಥೆಯಾದ Traffic Engineering Cell ನ ಮೂಲಕ ಪಾಲಿಕೆಯ ವ್ಯಾಪ್ತಿಯ ಹೊರ ವರ್ತುಲ ರಸ್ತೆ ಸೇರಿದಂತೆ ಪ್ರಮುಖ Arterial ರಸ್ತೆಗಳ ಮೇಲ್ಭಾಗದಲ್ಲಿ 10 mm ದಪ್ಪನೆಯ Micro Surfacing ಕಾರ್ಯವನ್ನು ಮಾಡುವ ಸುಮಾರು 13 ಕೋಟಿ ರೂಪಾಯಿಗಳಷ್ಟು ಮೊತ್ತದ ಕಾಮಗಾರಿಗಳನ್ನು 15ನೇ ಹಣಕಾಸು ಆಯೋಗದ ಅನುದಾನದ ಮೂಲಕ ಮಾಡುವ ಸಂಬಂಧ ನಿಯಮಾನುಸಾರ ಟೆಂಡರ್ ಅನ್ನು ಆಹ್ವಾನಿಸುವ ಮೊದಲೇ ಪೂರ್ವ ನಿಗದಿತ ಗುತ್ತಿಗೆದಾರರ ಮೂಲಕ ಈ ಕಾರ್ಯವನ್ನು ಮಾಡಿಸಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದ್ದು, ಈಗಾಗಲೇ ನಿಯಮಬಾಹಿರವಾಗಿ Micro Surfacing ಮಾಡಿರುವ ರಸ್ತೆಗಳೆಲ್ಲಾ ಸಂಪೂರ್ಣವಾಗಿ ಹಾಳಾಗಿದ್ದು, ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ಪ್ರಕರಣ ನಡೆದಿರುತ್ತದೆಯಲ್ಲದೆ ಅನುದಾನದ ಬಹುತೇಕ ಮೊತ್ತವನ್ನು ರಸ್ತೆ ಗುಂಡಿಗಳಲ್ಲಿ ಹಾಕಿದಂತಾಗಿದೆ.
 
15ನೇ ಹಣಕಾಸು ಆಯೋಗದ ಅನುದಾನಗಳ ಬಳಕೆಯ ಸಂದರ್ಭದಲ್ಲಿ ಅಳವಡಿಸಿಕೊಳ್ಳಬೇಕಾದ ನಿಯಮಗಳನ್ನು ಪಾಲಿಸದೆಯೇ ಮತ್ತು ಇದಕ್ಕೆಂದೇ ರಚಿಸಲ್ಪಟ್ಟಿರುವ City Level Implementation Committee ಯ ಮುಂದೆ ಕ್ರಿಯಾ ಯೋಜನೆಯನ್ನು ಮಂಡಿಸಿ ಅನುಮೋದನೆ ಪಡೆಯದೆಯೇ ಏಕಾಏಕಿ ಮೊದಲೇ ನಿರ್ಧರಿತವಾಗಿದ್ದ ಗುತ್ತಿಗೆದಾರರ ಮೂಲಕ ಈ ಕಳಪೆ ಕಾಮಗಾರಿಯನ್ನು ಟೆಂಡರ್ ಕರೆಯದೆಯೇ ನಿರ್ವಹಿಸಿರುವ ಹಗರಣದ ಸಂಬಂಧ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಮಾನ್ಯ ಆಡಳಿತಾಧಿಕಾರಿಗಳು ಹಾಗೂ ಮಾನ್ಯ ಮುಖ್ಯ ಆಯುಕ್ತರಿಗೆ ದಾಖಲೆಗಳ ಸಹಿತ ದೂರನ್ನು ನೀಡಲಾಗಿದೆ ಮತ್ತು ರಸ್ತೆಗಳ ಮೂಲಭೂತ ಸೌಕರ್ಯಗಳ ಇಲಾಖೆಯ ಮುಖ್ಯ ಅಭಿಯಂತರರಾದ B. S. ಪ್ರಹ್ಲಾದ್, Traffic Engineering Cell ನ ಕಾರ್ಯಪಾಲಕ ಅಭಿಯಂತರರಾದ ಶ್ರೀನಿವಾಸ್ ಮತ್ತು ಈ ಎಲ್ಲಾ ಹಗರಣಗಳ ಕಾರಣಕರ್ತರಾಗಿರುವ Traffic Engineering Cell ನ ಸಹಾಯಕ ಕಾರ್ಯಪಾಲಕ ಅಭಿಯಂತರ ಅಶೋಕ್ ಬಾಗಿ ರವರ ವಿರುದ್ಧ ಕೂಡಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಹಾಗೂ ಈ ಹಗರಣದ ತನಿಖೆಗೆ ಆದೇಶಿಸಬೇಕೆಂದು  ಆಗ್ರಹಿಸಲಾಗಿದೆ.
 
ಈ ಸಂಬಂಧ - ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಪಾಲಿಕೆಯ ಮುಖ್ಯ ಆಯುಕ್ತರು ಮತ್ತು ಆಡಳಿತಾಧಿಕಾರಿಗಳಿಗೆ ದಾಖಲೆಗಳ ಸಹಿತ ದೂರುಗಳನ್ನು ಸಲ್ಲಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments