Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಜಲಮಂಡಳಿ ನೀರು ಕುಡಿಯುವ ಮುನ್ನ ಸಿಟಿ ಜನರೇ ಎಚ್ಚರ. ಎಚ್ಚರ .. ಕಾವೇರಿ ನೀರಿಗೆ ಸೇರುತ್ತಿದೆ ಕೊಳಚೆ ನೀರು.! ಕೊಳಚೆ ನೀರು ಸೇವಿಸಿದ ಸುಮಾರು 20ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖ ಲಾಗಿರುವ ಘಟನೆ ಎಚ್ಬಿಆರ್ನ ಟೆಲಿ ಕಾಂ ಲೇಔಟ್ನಲ್ಲಿ ನಡೆದಿದೆ.ಘಟನೆ ನಡೆದು ಒಂದು ವಾರ ಕಳೆದರೂ ಸಹ ಜಲಮಂಡಳಿ ಅಕಾರಿಗಳು ಸ್ಥಳಕ್ಕೆ ಬಾರದಿರುವುದು ದುರಾದೃಷ್ಟಕರ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಘಟನೆ ಬಗ್ಗೆ ಜಲಮಂಡಳಿ ಅಕಾರಿಗಳನ್ನು ಪ್ರಶ್ನಿಸಿದರೆ, ನಮ್ಮಿಂದು ಯಾವುದೇ ತಪ್ಪಾಗಿಲ್ಲ ಎಂದು ಹಾರಿಕೆ ಉತ್ತರಗಳನ್ನು ನೀಡುತ್ತಿದ್ದಾರೆ. ನಗರದ ವಿವಿಧೆಡೆ ಕುಡಿಯುವ ನೀರು ಹಾಗೂ ಇತರೆ ಕಾಮಗಾರಿಗಳು ನಡೆಯುತ್ತಿದ್ದು, ಇದರಿಂದ ಕಾವೇರಿ ನೀರಿನ ಪೈಪ್ಗಳಿಗೆ ಹಾನಿಯುಂಟಾಗಿ ಇದಕ್ಕೆ ಕಲುಷಿತ ನೀರು ಸೇರುವುದರಿಂದ ಇಂತಹ ಘಟನೆಗಳು ನಡೆಯುತ್ತಲೇ ಇವೆ ಎಂದು ಹೇಳಲಾಗುತ್ತಿದೆ.