ಕರ್ನಾಟಕ ಕರಕುಶಲ ನಿಗಮದಿಂದ ಮತ್ತೊಂದು ಮೈಲಿಗಲು...!!!!!
Publish Date: Wednesday, 13 October 2021 (17:25 IST)
Updated Date: Wednesday, 13 October 2021 (20:17 IST)
ಬೆಂಗಳೂರು , ಬುಧವಾರ, 13 ಅಕ್ಟೋಬರ್ 2021 (17:25 IST)
ಕರ್ನಾಟಕ ಕರಕುಶಲ ನಿಗಮದಿಂದಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ದುಬೈ EXPO ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯದ ಪ್ರತಿಷ್ಟಿತ ಮಳಿಗೆಯಾದ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ ಪಾಲ್ಗೊಳ್ಳಲಿದೆ ಎಂಬ ನಿರ್ಧಾರವನ್ನ ನಿಗಮದ ಬೋರ್ಡ್ ಸಭೆಯಲ್ಲಿ ಕೈಗೊಳ್ಳಲಾಯಿತು. ಅಕ್ಟೋಬರ್ 15 ರಿಂದ 21 ರವರೆಗೆ ಆರು ದಿನಗಳ ಕಾಲ ನಡೆಯಲಿರುವ ಈ ವಿಶೇಷ (ಎಕ್ಸ್ ಪೋ ) ಮೇಳದಲ್ಲಿ ಕರಕುಶಲ ನಿಗಮದ ವಿಶೇಷ ಉತ್ಪನ್ನಗಳು ತಮ್ಮ ಶ್ರೇಷ್ಟತೆ ಯನ್ನ ಜಗತ್ತಿಗೆ ಪ್ರದರ್ಶನಕ್ಕೆ ಅಣಿಯಾಗಿವೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇರೆ ಬೇರೆ ದೇಶಗಳ ಉತ್ಪನ್ನಗಳು ಈ ಮೇಳದಲ್ಲಿ ಪ್ರದರ್ಶನಕ್ಕಿಡಲಾಗಿದ್ದು
ಈ ಮೇಳದಲ್ಲಿ ಇದೀಗ ಕರ್ನಾಟಕದ ಉತ್ಪನ್ನಗಳು ಪ್ರದರ್ಶನಗೊಳ್ಳಲಿದೆ
ಈ ಮೂಲಕ ಕರಕುಶಲ ನಿಗಮ ಮತ್ತೊಂದು ಮೈಲಿಗಲ್ಲು ಸಾದಿಸಲಿದೆ. ( ಕಾವೇರಿ ಹ್ಯಾಂಡಿಕ್ರಾಪ್ಟ್ )