ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರ ವಿರುದ್ಧ ಬಿಬಿಎಂಪಿ ಮತ್ತೊಂದು ಬ್ರಹ್ಮಾಸ್ತ್ರ ರೆಡಿಮಾಡಿದೆ.ಇನ್ಮೇಲೆ ತೆರಿಗೆ ಕಟ್ಟಿಲ್ಲ ಅಂದರೆ ಆಸ್ತಿನೇ ಮಾರಾಟವಾಗಲ್ಲ,ಆಸ್ತಿ ತೆರಿಗೆ ವಸೂಲಿಗೆ ಸಬ್ ರಿಜಿಸ್ಟ್ರಾರ್ ಗಳ ಸಪೋರ್ಟ್ ಗೆ ಬಿಬಿಎಂಪಿ ಮುಂದಾಗಿದೆ.ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರ ಆಸ್ತಿ ಬೇರೆಯವರಿಗೆ ಖಾತಾ ಮಾಡದಂತೆ ಸೂಚನೆ ನೀಡಲಾಗಿದೆ.
ಬಿಬಿಎಂಪಿಯಿಂದ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಪತ್ರ ಬರೆಯಲು ನಿರ್ಧಾರ ಮಾಡಿದ್ದು,ತೆರಿಗೆ ವಸೂಲು ಚುರುಕು ಗೊಳಿಸಲು ಪಾಲಿಕೆ ಹೊಸ ಪ್ರಯೋಗ ಮಾಡಿದೆ.ಮಾಲ್ ಟೆಕ್ ಪಾರ್ಕ್,ಅಪಾರ್ಟ್ಮೆಂಟ್, ಶಾಲಾ ಕಾಲೇಜು, ಹಾಗೂ ವಾಣಿಜ್ಯ ಕಟ್ಟಡಗಳಿಂದ ,500 ಕೋಟಿ ಆಸ್ತಿ ತೆರಿಗೆ ಬಾಕಿ ಇದೆ.ಹೀಗಾಗಿ ಆಸ್ತಿ ತೆರಿಗೆ ದೋಖಾ ಮಾಡೋರ ವಿರುದ್ಧ ಬಿಬಿಎಂಪಿ ಸಮರ ಸಾರಲು ಮುಂದಾಗಿದೆ.
ಇನ್ಮೇಲೆ ತೆರಿಗೆ ಕಟ್ಟದ ಮಾಲೀಕರ ಆಸ್ತಿ ಬೇರೆಯವರಿಗೆ ಮಾರಾಟ ಮಾಡಿದ್ರೆ ಖಾತಾ ಆಗಲ್ಲ.ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಖಾತಾ ಮಾಡದಂತೆ ಸೂಚನೆ ಬಿಬಿಎಂಪಿ ಸೂಚನೆ ನೀಡಲು ಮುಂದಾಗಿದೆ.ಬಿಬಿಎಂಪಿ ಗೆ ಬಾಕಿ ತೆರಿಗೆ ಕಟ್ಟಿದ್ರೆ ಅಷ್ಟೇ ಆಸ್ತಿ ಮಾರಾಟಕ್ಕೆ ಅವಕಾಶ ಇರಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.