ಬೆಂಗಳೂರು-ರಾಜ್ಯಪಾಲರನ್ನ ಭೇಟಿ ಮಾಡಿ ಬರ್ತಿದ್ದೇವೆ.ನಮ್ಮಜೊತೆ ಸದಾನಂದಗೌಡರು, ಬೊಮ್ಮಾಯಿ, ಅಶ್ವಥ್ ನಾರಾಯಣ್ ಎಲ್ಲರೂ ಇದ್ರು.ರಾಜ್ಯದಲ್ಲಿ ಬೇಜವಾಬ್ದಾರಿ ಸರ್ಕಾರ ಇದೆ.600, 700 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅವರ ಕಡೆ ತಿರುಗಿ ನೋಡ್ತಿಲ್ಲ.ಅಧಿಕಾರಿಗಳು ಭೇಟಿ ಮಾಡಿಲ್ಲ.ಸಚಿವರು ಹೋಗಿಲ್ಲ.ಉ.ಕ ದಲ್ಲಿ ಬರ ಬಂದು ಗುಳೆ ಹೋಗ್ತಿದ್ದಾರೆ.ಬರ ಬಂದು ಇಷ್ಟು ದಿನ ಆದ್ರೂ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ.
2 ಸಾವಿರ ಹಣ ಕೊಡ್ತೀವಿ ಅಂದ್ರು ಕೊಟ್ಟಿಲ್ಲ.ದಿನನಿತ್ಯ ರೈತರ ಆತ್ಮಹತ್ಯೆ ನಡೆಯುತ್ತಿದ್ರೂ ಅವರ ಕಡೆ ನೋಡ್ತಿಲ್ಲ.ರೈತರು ದಿಕ್ಕು ತೋಚದಂತಾಗಿದ್ದಾರೆ.ನಮ್ಮ ನೆರವಿಗೆ ಬಂದಿಲ್ಲ ಕೇಂದ್ರ ಅಂತಾರೆ.ಬೊಮ್ಮಾಯಿ ಅವರು ಇಲ್ಲೇ ಇದ್ದಾರೆ.ಅವರು ಸಿಎಂ ಆಗಿದ್ದಾಗ, ನಾನು ಕಂದಾಯ ಸಚಿವ ಇದ್ದೆ.ಕೇಂದ್ರಕ್ಕೆ ಮನವಿ ಕೊಟ್ಟಿದ್ದೆವು.ಕೇಂದ್ರದ ಪರಿಹಾರಕ್ಕೆ ಕಾಯದೆ, DBT ಮೂಲಕ 3 ಸಾವಿರ ಕೋಟಿಗೂ ಹೆಚ್ಚು ಹಣ ಕೊಟ್ಟಿದ್ದೇವೆ.
ನಮ್ಮ ಬಳಿ ದಾಖಲೆ ಇದೆ.ಇವರು ಕೊಡ್ತಿರೋದು 100 ಕೋಟಿ.ರೈತರ ಕಡೆಗಣನೆ ಸ್ಪಷ್ಟವಾಗಿದೆ.ನಾವು ಕೊಟ್ಟ ಮೂರು ತಿಂಗಳ ಬಳಿಕ ಕೇಂದ್ರ ಹಣ ಬಿಡುಗಡೆ ಮಾಡಿತು.ಹಣ ನಮ್ಮ ಖಜಾನೆಗೆ ಬಂತು.NDRF ನಿಯಮದ ಪ್ರಕಾರ 13 ಸಾವಿರ ಕೊಡಬೇಕಿತ್ತು.ನಾವು 26 ಸಾವಿರ ಕೊಟ್ಟೆವು.ರೈತರ ಪರ ಇದ್ದೀವಿ ಅಂತೀರಾ, ನಾಚಿಕೆ ಆಗಬೇಕು ನಿಮಗೆ.ರೈತರು ಬರ ಬರಲಿ ಅಂತಕಾಯ್ತಿದ್ದಾರೆ, ಹಣ, ಪರಿಹಾರ ಬರುತ್ತೆ ಅಂತ ಮಂತ್ರಿ ಹೇಳ್ತಾರೆ.ಕೂಡಲೇ ಹಣ ಬಿಡುಗಡೆ ಮಾಡಿ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.