ಬೆಂಗಳೂರು : ಸೆಪ್ಟೆಂಬರ್ 1ರಿಂದ ವಾಹನ ಸವಾರರು ಸಂಚಾರ ನಿಯಮವನ್ನು ಬ್ರೇಕ್ ಮಾಡಿದರೆ ಭಾರೀ ದಂಡ ತೆರಬೇಕಾಗುತ್ತದೆ.
ಹೌದು. 2019ರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಆಯ್ದ 63 ನಿಯಮಗಳು ಸೆಪ್ಟೆಂಬರ್ 1ರಿಂದ ಜಾರಿಯಾಗಲಿದೆ. ಹೊಸ ಕಾನೂನಿನ ಪ್ರಕಾರ, ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ, ಶಿಕ್ಷೆ ವಿಧಿಸಲು ಅವಕಾಶ ಇದೆ.
ಹಾಗಾಗಿ ವಾಹನ ದಾಖಲೆ ಇಲ್ಲದಿದ್ದರೆ ಸರಿ ಮಾಡಿಸಿ. ಡ್ರೈವಿಂಗ್ ಲೈಸೆನ್ಸ್ ಮತ್ತು ಇನ್ಷುರೆನ್ಸ್ ಇಲ್ಲ ಅಂದರೆ ಮಾಡಿಸಿಕೊಳ್ಳಿ. ಇಲ್ಲವಾದರೆ ಬಾರೀ ದಂಡ ತೆರಬೇಕಾಗುತ್ತದೆ.