ಹೌದು. ಅಮೆರಿಕಾದ ಕೊಯೆಲ್ಲಾ ಎಂಬ ಹೆಸರಿನ 96 ವರ್ಷದ ತಾತ ರಸ್ತೆಯಲ್ಲಿ ಅದರಲ್ಲೂ ಶಾಲಾ ವಲಯದಲ್ಲಿ ಅತಿಯಾದ ಸ್ಪೀಡ್ ನಲ್ಲಿ ಕಾರನ್ನು ಚಲಾಯಿಸಿದ್ದಾರೆ. ಇವರಿಗೆ ಸ್ಪೀಡಿಂಗ್ ಟಿಕೆಟ್ ಕೊಟ್ಟ ಸಂಚಾರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಅಲ್ಲಿ ತಾತ ನ್ಯಾಯಧೀಶರ ಮುಂದೆ, ನನ್ನ ಮಗ ಅಂಗವಿಕಲ ಮತ್ತು ಕ್ಯಾನ್ಸರ್ ಪೀಡಿತನಾಗಿದ್ದು, ಆತನಿಗೆ ಪ್ರತಿ ಎರಡು ವಾರಗಳಿಗೊಮ್ಮೆ ರಕ್ತ ಬದಲಿಸಲು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೆ. ಆದಕಾರಣ ಸ್ಪೀಡಾಗಿ ಕಾರನ್ನು ಚಲಾಯಿಸಿದ್ದೆ ಹೊರತು ಸಾಹಸ ಮಾಡಲು ಅಲ್ಲ ಎಂದು ನಿವೇದನೆ ಮಾಡಿಕೊಂಡಿದ್ದಾರೆ.
ಇದಕ್ಕೆ ಮರುಗಿದ ನ್ಯಾಯಾಧೀಶರು ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ, ನೀವು ಉತ್ತಮ ವ್ಯಕ್ತಿ ಎಂದು ಹೊಗಳಿ ಯಾವುದೇ ದಂಡ ವಿಧಿಸದೇ ಕಳುಹಿಸಿದರು.ಇದಕ್ಕೆ ಸಂಬಂಧಪಟ್ಟ ವಿಡಿಯೋ ಆನ್ ಲೈನ್ ನಲ್ಲಿ ಅಪ್ ಲೋಡ್ ಆಗಿದ್ದು, ಹಲವರು ತಾತನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.