Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೆಂಗಳೂರಿನ ವಾಹನ ಸವಾರರೇ ಎಚ್ಚರ.. ಎಚ್ಚರ..!

ಬೆಂಗಳೂರಿನ ವಾಹನ ಸವಾರರೇ ಎಚ್ಚರ.. ಎಚ್ಚರ..!
ಬೆಂಗಳೂರು , ಮಂಗಳವಾರ, 17 ಆಗಸ್ಟ್ 2021 (15:10 IST)
ಬೆಂಗಳೂರು:ಸಂಚಾರ ಪೊಲೀಸರು ರಸ್ತೆಯಲ್ಲಿ ಇದ್ದರಷ್ಟೇ ಸಂಚಾರ ನಿಯಮ ಪಾಲಿಸುವ ಸವಾರರೇ ಎಚ್ಚರ..! ಎಲ್ಲ ರೀತಿಯ ಟ್ರಾಫಿಕ್ ಉಲ್ಲಂಘನೆ ಕುರಿತು ಕಣ್ಗಾವಲು ಇಡುವ ಕೃತಕ ಬುದ್ಧಿಮತ್ತೆ(ಎಐ) ಹೊಂದಿರುವ ಕ್ಯಾಮೆರಾಗಳು ನಗರದಲ್ಲಿ ಅಳವಡಿಕೆಯಾಗಲಿವೆ. ಜತೆಗೆ ಸಂಚಾರ ಪೊಲೀಸರು ವಿಡಿಯೊ ಅನಾಲಿಟಿಕ್ಸ್ ತಂತ್ರಜ್ಞಾನ ಬಳಕೆ ಮಾಡುತ್ತಿರುವುದರಿಂದ ನಿಯಮ ಉಲ್ಲಂಘಿಸಿದರೆ ಸಿಕ್ಕಿ ಬೀಳುವುದು ಖಚಿತ.

ಸಿಗ್ನಲ್ ಜಂಪ್, ಸ್ಟಾಪ್ ಸಿಗ್ನಲ್ ಉಲ್ಲಂಘನೆ, ಅಜಾಗರೂಕ ಚಾಲನೆ, ಸೀಟ್ ಬೆಲ್ಟ್/ಹೆಲ್ಮೆಟ್ ಧರಿಸದಿರುವುದು, ಚಾಲನೆ ಮಾಡುವಾಗ ಮೊಬೈಲ್ ಪೋನ್ ಬಳಸುವುದು ಇತ್ಯಾದಿ ಯಾವುದೇ ರೀತಿಯ ಸಂಚಾರ ಉಲ್ಲಂಘನೆ ಮಾಡಿದರೂ ವಿಡಿಯೊ ಅನಾಲಿಟಿಕ್ಸ್ ತಂತ್ರಜ್ಞಾನದಲ್ಲಿ ಪತ್ತೆಯಾಗಲಿದೆ. ಸಂಚಾರ ಪೊಲೀಸ್ ಇಲಾಖೆಯ ಕಮಾಂಡ್ ಸೆಂಟರ್ನಲ್ಲಿ ಎಲ್ಲ ಮಾಹಿತಿ ದಾಖಲಾಗಲಿದ್ದು, ಅಲ್ಲಿಂದಲೇ ವಾಹನಗಳ ಮಾಲೀಕರ ವಿಳಾಸಕ್ಕೆ ದಂಡದ ಇ-ಚಲನ್ ತಲುಪಲಿದೆ. ಸಂಚಾರ ಪೊಲೀಸರ ಹಸ್ತಕ್ಷೇಪವಿಲ್ಲದೆ ದಂಡ ವಿಧಿಸುವ ಪ್ರಕ್ರಿಯೆ ಸಾಧ್ಯವಾಗಲಿದೆ.
ಹೊಸ ಇಂಟಿಗ್ರೇಟೆಡ್ ಟ್ರಾಫಿಕ್ ಎನ್ಫೋರ್ಸ್ಮೆಂಟ್ ಮ್ಯಾನೇಜ್ಮೆಂಟ್ ಸಿಸ್ಟಂ(ಐಟಿಇಎಂಎಸ್)ನ ಭಾಗವಾಗಿ ಕನಿಷ್ಠ 330 ಕೃತಕ ಬುದ್ಧಿಮತ್ತೆ(ಎಐ) ಹೊಂದಿರುವ ಕ್ಯಾಮೆರಾಗಳನ್ನು ಮುಂದಿನ ಆರು ತಿಂಗಳಲ್ಲಿ ನಗರಾದ್ಯಂತ ಅಳವಡಿಸಲಾಗುತ್ತದೆ. 250 ಕ್ಯಾಮೆರಾಗಳು ವಾಹನಗಳ ನಂಬರ್ ಪ್ಲೇಟ್ ಪರಿಶೀಲಿಸಲಿವೆ. ಹೆಚ್ಚುವರಿ 80 ಕ್ಯಾಮೆರಾಗಳು ಸಿಗ್ನಲ್ ಉಲ್ಲಂಘನೆಯನ್ನು ಪತ್ತೆ ಮಾಡುತ್ತವೆ. ವಿಡಿಯೊ ಅನಾಲಿಟಿಕ್ಸ್ ತಂತ್ರಜ್ಞಾನ ಬಳಕೆಯಿಂದ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನಗಳಿಗೆ ಸ್ವಯಂಚಾಲಿತವಾಗಿ ಇ-ಚಲನ್ಗಳನ್ನು ಸೃಜನೆ ಸಾಧ್ಯವಾಗಲಿದೆ.
ಸದ್ಯ ಕೆಂಪು ದೀಪ ಉಲ್ಲಂಘನೆ ಪತ್ತೆ ಹಚ್ಚುವ(ಆರ್ಎಲ್ವಿಡಿ) ತಂತ್ರಜ್ಞಾನ ಹೊಂದಿರುವ ಹತ್ತು ಕ್ಯಾಮೆರಾಗಳು ಟಿ.ಸಿ.ಪಾಳ್ಯ, ಎಸಿಎಸ್ ಸೆಂಟರ್, ಬಿಎಂಟಿಸಿ ಶಾಂತಿನಗರ, ದೇವೇಗೌಡ ಜಂಕ್ಷನ್ನಲ್ಲಿ ಅಳವಡಿಸಲಾಗಿದೆ. ಈ ಕ್ಯಾಮೆರಾಗಳನ್ನು ಹೊಸ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್(ಎಎನ್ಪಿಆರ್) ಸಿಸ್ಟಮ್ನೊಂದಿಗೆ ಲಿಂಕ್ ಮಾಡಲಾಗುತ್ತದೆ. ಇದು ಅತಿ ವೇಗ, ಹೆಲ್ಮೆಟ್ ಇಲ್ಲದೆ ಸವಾರಿ, ಸಿಗ್ನಲ್ ಜಂಪಿಂಗ್ ಇತ್ಯಾದಿಗಳಿಗೆ ಸಂಬಂಧಿಸಿದ ಉಲ್ಲಂಘನೆಗಳನ್ನು ದಾಖಲಿಸಲಿದೆ.

 
ಐಟಿಇಎಂಎಸ್ ತಂತ್ರಜ್ಞಾನವು ಸಂಚಾರ ನಿಯಮ ಉಲ್ಲಂಘನೆ ಕುರಿತ ಪ್ರತಿ ವಾಹನದ ಕನಿಷ್ಠ 5 ಪೋಟೋಗಳು ಮತ್ತು ಹತ್ತು ಸೆಕೆಂಡ್ಗಳ ವಿಡಿಯೊ ಕ್ಲಿಪ್ ಸಂಗ್ರಹಿಸಲಿದೆ. ಅಲ್ಲದೇ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಕಡ್ಡಾಯವಾಗಿ ದಂಡ ವಿಧಿಸುವ ಮೂಲಕ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರೇರೇಪಿಸುತ್ತದೆ. ಜತೆಗೆ ನಗರದಲ್ಲಿ ರಸ್ತೆ ಅಪಘಾತಗಳ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಲಿದೆ.
ನೂತನ ತಂತ್ರಜ್ಞಾನವು ಸಂಚಾರ ಪೊಲೀಸರ ಸಹಾಯವಿಲ್ಲದೆ ಸಂಚಾರ ನಿಯಮಗಳ ಉಲ್ಲಂಘನೆಯನ್ನು ಪತ್ತೆಹಚ್ಚಲಿದೆ. ಅಲ್ಲದೇ ಇದರಿಂದ ಲಂಚಗುಳಿತನ ತಗ್ಗಲಿದೆ. ವಾಹನಗಳ ಮಾಲೀಕರ ವಿಳಾಸಕ್ಕೆ ಕಮಾಂಡ್ ಸೆಂಟರ್ ಮೂಲಕ ದಂಡದ ಇ-ಚಲನ್ ತಲುಪಲಿದೆ.
- ಚಾಳಿ ಬಿದ್ದ ಆರೋಪಿಗಳ ಪತ್ತೆ ಸುಲಭ
ಐಟಿಇಎಂಎಸ್ನಿಂದಾಗಿ ಅಪರಾಧಿಗಳು ಮತ್ತು ಚಾಳಿಬಿದ್ದ ಸಂಚಾರ ಉಲ್ಲಂಘನೆ ಆರೋಪಿಗಳ ಪತ್ತೆ ಸುಲಭವಾಗಲಿದೆ. ಈ ಕ್ಯಾಮೆರಾಗಳು ಅತಿ ಹೆಚ್ಚು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಘಿಸಿ, ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಸಂಚಾರದ ಬಗ್ಗೆ ಕಮಾಂಡ್ ಸೆಂಟರ್ಗೆ ಮಾಹಿತಿ ನೀಡಲಿದೆ. ಮುಂದಿನ ಸಿಗ್ನಲ್ನಲ್ಲಿ ನಿರ್ದಿಷ್ಟ ವಾಹನವನ್ನು ಪೊಲೀಸರು ತಡೆಯಬಹುದು. ಅಲ್ಲದೇ ಇದರಿಂದ ಇತರೆ ವಾಹನಗಳನ್ನು ಅನಗತ್ಯವಾಗಿ ತಡೆದು ನಿಲ್ಲಿಸುವುದು ಕಡಿಮೆಯಾಗಲಿದೆ ಎಂದು ಸಂಚಾರ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ಮಗುವನ್ನೇ ಮದುವೆಯಾಗಲು ಕೋರ್ಟ್ಗೆ ಕಾನೂನು ಬದ್ಧ ಮನವಿ ಸಲ್ಲಿಸಿದ ಪೋಷಕರು