ನವದೆಹಲಿ(ಆ.17): ತಂದೆ ಮಗಳನ್ನು ಮದುವೆಯಾಗುವುದು, ತಾಯಿ ಮಗನನ್ನು ಮದುವೆಯಾಗುವುದು ಈಗ ಸಾಮಾನ್ಯ ಎನಿಸಿಬಿಟ್ಟಿದೆ. ಕೆಲವು ಕಡೆ ಮಾತ್ರ ಇಂತಹ ವಿಚಿತ್ರ ಘಟನೆಗಳು ನಡೆದಿರುವ ಬಗ್ಗೆ ಕೇಳಿದ್ದೇವೆ. ನ್ಯೂಯಾರ್ಕ್ನಲ್ಲಿ ಇಂತಹದ್ದೇ ಒಂದು ಘಟನೆ ವರದಿಯಾಗಿದೆ. ಅಲ್ಲಿ ಪೋಷಕರು ತಮ್ಮ ವಯಸ್ಕ ಮಗುವನ್ನು ಮದುವೆಯಾಗಲು ಕೋರ್ಟ್ಗೆ ಕಾನೂನುಬದ್ಧ ಮನವಿಯನ್ನು ಸಲ್ಲಿಸಿದ್ದಾರೆ.
ಜೊತೆಗೆ ಇದನ್ನು ವೈಯಕ್ತಿಕ ಸ್ವಾಯತ್ತತೆ ಎಂದು ಕರೆದಿದ್ದಾರೆ. ನ್ಯೂಯಾರ್ಕ್ ಪೋಸ್ಟ್ನಲ್ಲಿರುವ ವರದಿ ಪ್ರಕಾರ, ಪೋಷಕರು ತಮ್ಮ ಹೆಸರು ಹೇಳಲು ಇಚ್ಛಿಸಿಲ್ಲ. ಬದಲಾಗಿ ಅನಾಮಧೇಯರಾಗಿರಲು ಬಯಸಿದ್ದಾರೆ. ಯಾಕೆಂದರೆ ಕೋರ್ಟ್ಗೆ ಅವರು ಸಲ್ಲಿಸಿರುವ ಈ ವಿನಂತಿಯು ಸಮಾಜದ ಕಣ್ಣಿಗೆ ನೈತಿಕವಾಗಿ, ಜೈವಿಕವಾಗಿ ಮತ್ತು ಸಾಮಾಜಿಕವಾಗಿ ಅಸಹ್ಯಕರ ಎಂದು ಪರಿಗಣಿಸಲ್ಪಡುತ್ತದೆ ಎಂಬುದು ಅವರ ಭಾವನೆ. ಹೀಗಾಗಿ ಕೋರ್ಟ್ನ ದಾಖಲೆಗಳು ಹಾಗೂ ಪತ್ರಿಕೆಗಳಲ್ಲೂ ಸಹ ಪೋಷಕರು ಹಾಗೂ ಮಗುವಿನ ಬಗ್ಗೆ ಯಾವುದೇ ವಿವರಣೆ ನೀಡಿಲ್ಲ. ಯಾವುದೇ ಲಿಂಗ, ಊರು ಅಥವಾ ಇನ್ನಿತರೆ ವಿವರಗಳನ್ನು ಬಹಿರಂಗಪಡಿಸಿಲ್ಲ ಎಂದು ತಿಳಿದುಬಂದಿದೆ.
ಪೋಷಕರು ಸಲ್ಲಿಸಿರುವ ವಿನಂತಿಯಲ್ಲಿ, ಮದುವೆ ಎಂಬುದು ಇಬ್ಬರು ವ್ಯಕ್ತಿಗಳ ನಡುವಿನ ಉತ್ತಮ ಬಾಂಧವ್ಯವಾಗಿದೆ. ಇಬ್ಬರ ನಡುವಿನ ಆತ್ಮೀಯತೆ ಮತ್ಯು ಆಧ್ಯಾತ್ಮಿಕತೆಯ ಹೆಚ್ಚಿನ ಅಭಿವ್ಯಕ್ತಿ ಆಗಿದೆ ಎಂದು ಪೋಷಕರು ವಾದಿಸಿದ್ದಾರೆ.
ನ್ಯೂಯಾರ್ಕ್ ಕಾನೂನಿನ ಪ್ರಕಾರ, ಪೋಷಕರು ಮತ್ತು ಮಗುವಿನ ನಡುವಿನ ಲೈಂಗಿಕ ಸಂಬಂಧವು ಮೂರನೇ ಶ್ರೇಣಿಯ ಅಪರಾಧವಾಗಿದೆ ಹಾಗೂ 4 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ. ತಮ್ಮ ಸ್ವಂತ ಮಗುವನ್ನು ಮದುವೆಯಾಗಲು ಬಯಸುವ ಪೋಷಕರು ಹಾಗೆ ಪ್ರಸ್ತಾಪಿಸುತ್ತಾರೆ. ಆದರೆ ಕಾನೂನಿಗೆ ವಿರುದ್ಧಚಾಘು ಮಾಡಿದರೆ ಅದು ಭಾವನಾತ್ಮಕ ಹಾನಿಯನ್ನುಂಟು ಮಾಡಬಹುದು.
ಕೆಲವು ದಿನಗಳ ಹಿಂದಷ್ಟೇ, ಚೀನಾದಲ್ಲಿ ಇದೇ ರೀತಿಯ ಘಟನೆ ವರದಿಯಾಗಿತ್ತು. ತಾಯಿಯೊಬ್ಬಳು ತನ್ನ ಮಗ ಮದುವೆಯಾಗಲಿರುವ ಹುಡುಗಿಯನ್ನು ನೋಡಿ ಬಹಳ ವರ್ಷಗಳ ಹಿಂದೆ ಕಳೆದುಹೋಗಿದ್ದ ತನ್ನ ಮಗಳು ಎಂದು ಭಾವಿಸಿದಳು. ಬಳಿಕ ಅದನ್ನು ಪಕ್ಕಕ್ಕಿಟ್ಟು ಮಗನ ಮದುವೆ ಮಾಡಿದರು. ಅದರಂತೆ ಮಾರ್ಚ್ 31ರಂದು ಚೀನಾದ ಜಿಯಾಂಗ್ಸು ಪ್ರಾಂತ್ಯದ ಸುಜೌಹುನಲ್ಲಿ ನಡೆದ ತನ್ನ ಮಗನ ಮದುವೆ ಬಳಿಕ ಆ ತಾಯಿ ಕಣ್ಣೀರು ಹಾಕಿದರು. ಬಳಿಕ ವಧುವಿನ ಕೈಯಲ್ಲಿ ಜನ್ಮ ರೇಖೆಯನ್ನು ನೋಡಿ, ಆ ತಾಯಿ ಆಘಾತಕ್ಕೀಡಾದರು. ಕಳೆದುಹೋದ ತನ್ನ ಮಗಳಿಗೂ ಇದೇ ರೀತಿ ರೇಖೆ ಇತ್ತು ಎಂದು ಆಶ್ಚರ್ಯಗೊಂಡರು.
ಕೂಡಲೇ ಆ ತಾಯಿ ವಧುವಿನ ತಂದೆ-ತಾಯಿಯನ್ನು ಭೇಟಿ ಮಾಡಿ, ನಿಮ್ಮ ಮಗಳನ್ನು ದತ್ತು ತೆಗೆದುಕೊಂಡಿದ್ದೀರಾ ಎಂದು ಕೇಳಿದಳು. ಈ ಪ್ರಶ್ನೆ ಕೇಳಿದ ವಧುವಿನ ಕುಟುಂಬಕ್ಕೆ ಬರಸಿಡಿಲು ಬಡಿದಂತಾಯಿತು. ಯಾಕೆಂದರೆ ಅವರು ಇಷ್ಟು ದಿನ ಈ ವಿಷಯವನ್ನು ಗುಟ್ಟಾಗಿ ಇಟ್ಟಿದ್ದರು. ಮದುವೆ ಸಂದರ್ಭದಲ್ಲೂ ಸಹ ಹುಡುಗನ ಮನೆಯವರಿಗೆ ಈ ವಿಷಯ ತಿಳಿಸಿರಲಿಲ್ಲ. ವಧುವಿನ ಪೋಷಕರು ಬಳಿ ಇದ್ದುದ್ದು ದತ್ತು ಮಗಳೇ ಎಂದು ವರದಿಗಳು ಹೇಳುತ್ತಿವೆ. 20 ವರ್ಷಗಳ ರಸ್ತೆ ಪಕ್ಕದಲ್ಲಿ ಅಳುತ್ತಾ ನಿಂತಿದ್ದ ಹೆಣ್ಣು ಮಗುವನ್ನು ಕರೆತಂದು ಸಾಕಿದೆವು ಎಂದು ಪೋಷಕರು ಹುಡುಗನ ತಾಯಿಗೆ ಹೇಳಿದರು.
ತನ್ನ ನಿಜವಾದ ಪೋಷಕರ ಬಗ್ಗೆ ತಿಳಿದಾದ ವಧು ಕಣ್ಣೀರು ಹಾಕಿದಳು. ಹಾಗೂ ತನ್ನ ಹೆತ್ತ ತಾಯಿಯನ್ನು ಕಂಡು ಮದುವೆಯ ದಿನಕ್ಕಿಂತ ಇಂದು ಹೆಚ್ಚು ಖುಷಿಯಾಗಿದೆ ಎಂದು ಹೇಳಿಕೊಂಡಳು.