Webdunia - Bharat's app for daily news and videos

Install App

ಮರಗಳ ಲೆಕ್ಕದಲ್ಲಿ ಎಡವಿದ ಬಿಬಿಎಂಪಿ..!

Webdunia
ಭಾನುವಾರ, 29 ಜನವರಿ 2023 (18:54 IST)
ಗಾರ್ಡನ್ ಸಿಟ್ ಎಲ್ಲರ ನೆಚ್ಚಿನ ತಾಣ. ಇಲ್ಲಿನ ಹಸಿರಿಗೆ ಮನಸೋತವರ್ಯಾಲಿಲ್ಲ ಹೇಳಿ. ಆದ್ರೆ ಇಲ್ಲಿರುವ ಮರ ಗಿಡ ಎಷ್ಟು ಅಂತ ಲೆಕ್ಕ ಹಾಕೋದೇ ಕಷ್ಟ. ಹೀಗಾಗಿ ಬಿಬಿಎಂಪಿ ಮರ ಗಿಡಗಳ ಎಣಿಕೆಗೆಂದು ಟೆಕ್ನಾಲಜಿ ಮೊರೆ ಹೋಗಿತ್ತು. ಆದ್ರೀಗ ಆ ಟೆಕ್ನಾಲಜಿ ಫಾಪ್ಲ್ ಆಗಿದೆ‌.ಬೆಂಗಳೂರಿನ  ಹಸಿರಿನ ಸೊಬಗಿಗೆ ಪ್ರತಿಯೊಬ್ಬರೂ ಸಹ ಮನಸೋತಿದ್ದಾರೆ. ಇದನ್ನು ರಕ್ಷಿಸಲು ಬಿಬಿಎಂಪಿ ವಿಬಿನ್ನವಾದ ಐಡಿಯಾ ಮಾಡಿತ್ತು..ನಗರದಲ್ಲಿ ಈಗಾಗಲೇ ಮೂರು ವರ್ಷಗಳ ಹಿಂದೆಯೇ ಆಗಬೇಕಿದ್ದ ಮರಗಣತಿ ಕುಂಟುತ್ತಾ ಸಾಗಿ ಪೂರ್ವಭಾವಿಯಾಗಿ ಪೈಲೆಟ್ ಯೋಜನೆ ಈ ಬಾರಿ ಎರಡು ವಾರ್ಡ್ ಗಳಲ್ಲಿ ಡಿಸೆಂಬರ್ ನಿಂದ ಆರಂಭವಾಗಿತ್ತು 

ಹಸಿರು ಹೊದಿಕೆ ಸಂರಕ್ಷಣೆ ದೃಷ್ಟಿಯಿಂದ ಅತಿ ಮುಖ್ಯವಾಗಿರುವ ಬಹು ನಿರೀಕ್ಷಿತ ಮರಗಳ ಗಣತಿ ಕಾರ್ಯದ ಪೈಲೆಟ್ ಯೋಜನೆ ಮಲ್ಲೇಶ್ವರ ಮತ್ತು ಮಹದೇವಪುರದ ಎಇಸಿಎಸ್ ಲೇಔಟ್ ವಾರ್ಡ್ ಗಳಲ್ಲಿ ಡಿಸೆಂಬರ್ ನಿಂದ ಆರಂಭವಾಗಿದೆ. ಆದರೆ ಬಿಬಿಎಂಪಿಯ ಅರಣ್ಯ ವಿಭಾಗವು ಟೆಂಡರ್ ಕರೆದು ಮಾರ್ಚ್ ವೇಳೆಗೆ ಮರ ಗಣತಿ ಕಾರ್ಯ ಆರಂಭಿಸಲು ನಿರ್ಧರಿಸಿದೆ. ಆದರೆ ಗಣತಿ ಕಾರ್ಯಕ್ಕೆ ಅಗತ್ಯವಾದ ಟ್ರೀ ಆಂಡ್ರಾಯ್ಡ್ ಆಪ್ ಇನ್ನೂ ಪೂರ್ಣ ರೂಪದಲ್ಲಿ ಸಿದ್ಧವಾಗದ ಕಾರಣ ಮರಗಣತಿ ಕಾರ್ಯ ಮತ್ತೆ ವಿಳಂಬವಾಗಿದೆ.ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ಮರಗಣತಿ ಕಾರ್ಯವನ್ನು ಪೈಲೆಟ್ ಯೋಜನೆ ಮೂಲಕ ಮಲ್ಲೇಶ್ವರ ವಾರ್ಡ್ ಹಾಗೂ ಮಹದೇವಪುರದಲ್ಲಿರುವ ಎಇಸಿಎಸ್ ಲೇಔಟ್ ವಾರ್ಡ್ ನಲ್ಲಿ ಡಿಸೆಂಬರ್ ನಲ್ಲಿ ಮರಗಣತಿಯನ್ನು ಡಿಸೆಂಬರ್ ಮೂರನೇ ವಾರದಿಂದ ಆರಂಭಿಸಿತ್ತು. ಆದರೆ ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್ ನಿರ್ಮಿಸಿರುವ ಮರಗಣತಿ ಆಪ್ ಆಗಾಗ ಹ್ಯಾಂಗ್ ಹಾಗೂ ದಾಖಲಿಸಿದ ಮಾಹಿತಿ ಅಂತರ್ಜಾಲದ ಮೂಲಕ ಅಪಲೋಡ್ ಆಗಲು ಸಾಕಷ್ಟು ವಿಳಂಬ ಆಗುತ್ತಿರುವ ಕಾರಣ ಹೆಚ್ಚು ಮರಗಳ ಗಣತಿ ಕಾರ್ಯ ವಿಳಂಬವಾಗುತ್ತಿದೆ ಎಂದು ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.ಒಟ್ಟಿನಲ್ಲಿ ಬಿಬಿಎಂಪಿ ಪ್ರತೀ ಬಾರಿಯೂ  ಅಭಿವೃದ್ಧಿ ಹೆಸರಿನಲ್ಲಿ ಹೊಸ ಹೊಸ  ಪ್ರೊಜೆಕ್ಟ್ ಗಳನ್ನ ತರುತ್ತಿದೆ. ಆದರೆ ಅವುಗಳು ಯಾವುದೇ ರೀತಿಯಲ್ಲಿ ಯಶಸ್ವಿ ಯಾಗುದು ಮಾತ್ರ ಕಂಡು ಬರುತ್ತಿಲ್ಲ
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ಅಡಿಕೆ ಬೆಳೆಗಾರರಿಗೆ ನಿರಾಸೆ

Gold Price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಆತಂಕ

Mamata Banerjee:ಪಾಕಿಸ್ತಾನ ವಿರುದ್ಧ ವಿಶ್ವಕ್ಕೆ ಮನವರಿಕೆ ಮಾಡಲು ನಮ್ಮ ಸಂಸದರನ್ನು ಕಳಿಸಲ್ಲ ಎಂದ ಮಮತಾ ಬ್ಯಾನರ್ಜಿ

Pakistan: ಉಗ್ರ ಸೈಫುಲ್ಲಾ ಮೃತದೇಹಕ್ಕೆ ರಾಷ್ಟ್ರಧ್ವಜ: ಪಾಕಿಸ್ತಾನದ ನಾಟಕ ಬಯಲು

India Pakistan: ಭಾರತದ ವಿರುದ್ಧ ಸೋತು ಸುಣ್ಣವಾದ ಬಳಿಕ ಚೀನಾ ಬಳಿ ಓಡಿದ ಪಾಕಿಸ್ತಾನ

ಮುಂದಿನ ಸುದ್ದಿ
Show comments