ಫೆ.13ರಿಂದ ಏರ್ ಶೋ ಹಿನ್ನೆಲೆ ಯಲಹಂಕ ವಲಯದಲ್ಲಿ ಮಾಂಸ ಮಾರಾಟ ನಿಷೇಧಿಸಲಾಗಿದೆ.ಬೆಂಗಳೂರಿನ ಯಲಹಂಕದಲ್ಲಿರುವ ಏರ್‌ಫೋರ್ಸ್ ಸ್ಟೇಷನ್ ಸುತ್ತಮುತ್ತಿನ ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮಾಡದಂತೆ ಬಿಬಿಎಂಪಿ ಆದೇಶ ಮಾಡಿದೆ.ಮಾಂಸ ಮಾರಾಟ ಹಾಗೂ ಹೋಟೆಲ್, ರೆಸ್ಟೊರೆಂಟ್‌ಗಳ ಮಾಂಸಾಹಾರ ಮಾರಾಟ ನಿಷೇಧ ಮಾಡಲಾಗಿದ್ದು, ಜನವರಿ 30ರಿಂದ ಈ ಆದೇಶ ಜಾರಿಯಾಗಲಿದೆ.ಆದೇಶ ಉಲ್ಲಂಘಿಸಿದರೆ ಕ್ರಮಕೈಗೊಳ್ಳುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದೆ.
ಫೆಬ್ರವರಿ 17ರವರೆಗೂ ಏರೋ ಇಂಡಿಯಾ ಪ್ರದರ್ಶನ ಹೀಗಾಗಿ ಹೋಟೆಲ್, ಡಾಬಾಗಳಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಮಾರಾಟಕ್ಕೆ ನಿರ್ಬಂಧ ವಿಧಿಸಲಗಿದ್ದು,ಆದೇಶ ಉಲ್ಲಂಘಿಸಿದರೆ ಭಾರತೀಯ ಏರ್‌ಕ್ರಾಫ್ಟ್ ರೂಲ್ಸ್ 1937ರ ರೂಲ್ 91ರಂತೆ ಕ್ರಮ ಕೈಗೊಳ್ಳಲಾಗುತ್ತೆ.ಏರ್ ಶೋ ವೇಳೆ 250 ಇ-ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ.