Publish Date: Sat, 26 Mar 2022 (14:30 IST)
Updated Date: Sat, 26 Mar 2022 (14:33 IST)
ಇನ್ನು ಮುಂದೆ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರಕಟಿಸಿದೆ ಎಂದ ತಪ್ಪು ಸಂದೇಶವೊಂದು ಮೊಬೈಲ್ ಗಳಲ್ಲಿ ಹರಿದಾಡಿದ್ದು, ಇದರ ಪರಿಣಾಮ ವಿಧಾನಸೌಧದಲ್ಲಿ ಸಿಬ್ಬಂದಿ ಮತ್ತು ಶಾಸಕರು ಮಾಸ್ಕ್ ಇಲ್ಲದೆ ಓಡಾಡಿದ ಬೆಳವಣಿಗೆಗಳು ಶುಕ್ರವಾರ ಕಂಡು ಬಂದಿತ್ತು.
ಬಿಜೆಪಿ ಎಂಎಲ್ಸಿ ಭಾರತಿ ಶೆಟ್ಟಿ ಅವರು ಪರಿಷತ್ತಿನಲ್ಲಿ ಪ್ರಸ್ತಾಪಿಸಿದರು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇಂತಹ ಸೂಚನೆಗಳನ್ನು ನೀಡಿದೆಯೇ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರಿಗೆ ಪ್ರಶ್ನೆ ಮಾಡಿದರು. ಆದರೆ, ಈ ಪ್ರಶ್ನೆಗೆ ಉತ್ತರಿಸಲು ಸುಧಾಕರ್ ಅವರು ಸದನದಲ್ಲಿ ಹಾಜರಿರಲಿಲ್ಲ.