Select Your Language

Notifications

webdunia
webdunia
webdunia
webdunia

ಘಟನೆ ಗೆ ಬಿಬಿಎಂಪಿ ನಿರ್ಲಕ್ಷ್ಯ ಬೆಳಕಿಗೆ..!

ಘಟನೆ ಗೆ ಬಿಬಿಎಂಪಿ ನಿರ್ಲಕ್ಷ್ಯ ಬೆಳಕಿಗೆ..!
bangalore , ಬುಧವಾರ, 7 ಜೂನ್ 2023 (17:04 IST)
ಮಹಾಮಳೆಗೆ ಕೆಆರ್ ಸರ್ಕಲ್ ಅಂಡರ್ ಪಾಸ್ ನಲ್ಲಿ ಕಾರು ಸಿಲುಕಿ   ಯುವತಿ ಸಾವು ಪ್ರಕರಣ  ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಅಧಿಕಾರಿಗಳು,ಇಂದು ಲೋಕಾಯುಕ್ತ ಐಜಿಪಿ ಘಟನಾ ಸ್ಥಳಕ್ಕೆ ಭೇಟಿ‌ ನೀಡಿದ್ರು.  ಘಟನ ಸ್ಥಳಕ್ಕೆ ಘಟನೆಗೆ ಕಾರಣವೇನು. ಏನೆಲ್ಲ ಸಮಸ್ಯೆಗಳಿಂದ ಅವಘಡ ಸಂಭವಿಸಿತು. ಏನೆಲ್ಲಾ ಲೋಪವಿತ್ತು. ಸಂಬಂಧಿಸಿದ ಅಧಿಕಾರಿಗಳು ಯಾರು ಎಂಬ ಮಾಹಿತಿ ಕಲೆ ಹಾಕಿದ್ರು .ಮೇ. 21ರಂದು ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಕೆ.ಆರ್. ಸರ್ಕಲ್ ನಲ್ಲಿ ಖಾಸಗಿ ಕಂಪನಿ ಉದ್ಯೋಗಿ ಭಾನು ರೇಖಾ ಎಂಬಾಕೆ ಮಳೆ ನೀರಿನಲ್ಲಿ‌ ಮುಳುಗಿ ಸಾವನ್ನಪ್ಪಿದ್ಲು. ಆ ಘಟನೆಗೆ ಸಂಬಂಧಿಸಿದಂತೆ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದ ರಾಜ್ಯ ಲೋಕಾಯುಕ್ತ 15 ದಿನಗಳಲ್ಲಿ ಸಂಪೂರ್ಣ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ರು. ಆ ಹಿನ್ನೆಲೆ ಇಂದು ಲೋಕಾಯುಕ್ತ ಐಜಿಪಿ ಸುಬ್ರಮಣ್ಯೇಶ್ವರ ರಾವ್ ನೇತೃತ್ವದಲ್ಲಿ ತನಿಖಾ ತಂಡ ಕೆ.ಆರ್. ಸರ್ಕಲ್ ಅಂಡರ್ ಪಾಸ್ ನಲ್ಲಿ ದುರ್ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ರು.

ಲೋಕಾಯುಕ್ತ ಪೊಲೀಸ್ ವಿಂಗ್ ನ ತನಿಖಾಧಿಕಾರಿಗಳೊಂದಿಗೆ ಅಂಡರ್ ಪಾಸ್ ಗೆ ಭೇಟಿ ನೀಡಿದ ಲೋಕಾಯುಕ್ತ ಐಜಿಪಿ ಸುಬ್ರಮಣ್ಯೇಶ್ವರ ರಾವ್ ಅಂಡರ್ ಪಾಸ್ ನಿರ್ವಹಣೆ ಸಂಬಂಧಿಸಿದಂತೆ ಸ್ಥಳದಲ್ಲಿ ಹಾಜರಿದ್ದ ಇಂಜಿನಿಯರ್ ಗಳಿಂದ ಮಾಹಿತಿ ಪಡೆದಿದ್ದಾರೆ. ಅಂಡರ್ ಪಾಸ್ ನಿಂದ ಡ್ರೈನೇಜ್ ಸೇರುವ ಮಳೆ ನೀರು ದುರಂತ ನಡೆದ ದಿನ ಯಾಕೆ ಸರಾಗವಾಗಿ ಹೊರ ಹೋಗಿಲ್ಲ. ಅಲ್ಲಿ ಯಾವ ನೂನ್ಯತೆಗಳಿದ್ವು. ಅದು ಯಾವ ಅಧಿಕಾರಿಗಳು ವ್ಯಾಪ್ತಿಗೆ ಬರುತ್ತೆ. ಅವ್ರು ಅಂಡರ್ ಪಾಸ್ ನಿರ್ವಹಣೆಯಲ್ಲಿ ಯಾವ ಅಧಿಕಾರಿಯ ಕರ್ತವ್ಯ ಲೋಪವಿದೆ ಎಂಬುದರ ಬಗ್ಗೆ ಸಂಬಂಧಿಸಿದ ಬಿಬಿಎಂಪಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ, ಜನತಾ ದಳದವರಿಗೆ ನಮ್ಮ ಯೋಜನೆ ಜಾರಿಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ- ಡಿಸಿಎಂ ಡಿ.ಕೆ.ಶಿ