Publish Date: Wed, 07 Jun 2023 (14:33 IST)
Updated Date: Wed, 07 Jun 2023 (14:36 IST)
ಕೆ.ಆರ್.ಸರ್ಕಲ್ ಅಂಡರ್ ಪಾಸ್ ನಲ್ಲಿ ಯುವತಿ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಘಟನಾ ಸ್ಥಳಕ್ಕೆ ಲೋಕಾಯುಕ್ತ ಐಜಿಪಿ ಭೇಟಿ ನೀಡಿದ್ದಾರೆ.ಲೋಕಾಯುಕ್ತ ಐಜಿಪಿ ಸುಬ್ರಹ್ಮಣ್ಯೇಶ್ವರ ರಾವ್ ಬೇಟಿ ಹಿನ್ನೆಲೆ ಬಿಬಿಎಂಪಿಯಿಂದ ಆತುರಾತುರವಾಗಿ ಕೆಲಸ ಮಾಡಲಾಗಿದೆ.ಮೇಲ್ನೋಟಕ್ಕೆ ಎಲ್ಲ ಸರಿಯಾಗಿದೆ ಎಂದು ತೋರಿಸಿಕೊಳ್ಳೊ ಪ್ರಯತ್ನ ಮಾಡಿದ್ದಾರೆ.
ಅಂಡರ್ ಪಾಸ್ ನಲ್ಲಿ ಮುಚ್ಚಿರುವ ಪೈಪ್ ಗಳ ಕ್ಲೀನಿಂಗ್ ಮಾಡಿದ್ದಾರೆ.ಟ್ಯಾಂಕರ್ ಬಳಸಿಕೊಂಡು ಸ್ವಚ್ಚತ ಕಾರ್ಯದಲ್ಲಿ ಬಿಬಿಎಂಪಿ ಅಧಿಕಾರಿಗಳು ತೊಡಗಿದ್ದಾರೆ.ರಾತ್ರಿಯಿಂದಲೆ ಅಂಡರ್ ಪಾಸ್ ಅಧಿಕಾರಿಗಳು ಕ್ಲೋಸ್ ಮಾಡಿದ್ದಾರೆ.ಮಳೆ ನೀರಿನಿಂದ ಯುವತಿ ಸಾವು ಸಂಬಂಧ ಸುಮೋಟೋ ಕೇಸ್ ನ್ನ ಲೋಕಯುಕ್ತ ದಾಖಲಿಸಿಕೊಂಡಿದೆ.