Publish Date: Thu, 09 Feb 2023 (18:39 IST)
Updated Date: Thu, 09 Feb 2023 (18:41 IST)
ಚುನಾವಣಾ ಹೊಸ್ತಿಲಲ್ಲೆ ಸರ್ಕಾರಕ್ಕೆ ಒಂದಾದ ಮೇಲೊಂದರಂತೆ ಸಂಕಷ್ಟಗಳ ಸರಮಾಲೆಯೇ ಎದುರಾಗುತ್ತಿದೆ. ಸರ್ಕಾರದ ವಿರುದ್ಧ ಸಿಡಿದೆದ್ದಿರುವ BBMP ನೌಕರರು ಇಂದು ರಸ್ತೆಗಿಳಿದಿದ್ರು. BBMP ಕಚೇರಿಗಳು ಇಂದು ಸಂಪೂರ್ಣ ಬಂದ್ ಆಗಿದ್ದವು. ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದರು. ಪ್ರತಿಭಟನೆಯಲ್ಲಿ BBMP ಅಧಿಕಾರಿಗಳು, ನೌಕರರು ಭಾಗಿಯಾಗಿದ್ದರು. ಕಂದಾಯ, ಆರೋಗ್ಯ, ಶಿಕ್ಷಣ, ಮಾರುಕಟ್ಟೆ, ಆಡಳಿತ ವಿಭಾಗದ ಅಧಿಕಾರಿಗಳು ಸಾಮೂಹಿಕ ರಜೆ ಹಾಕಿ 7 ಸಾವಿರ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಮುಖ್ಯ ಆಯುಕ್ತರು ಬೇಡಿಕೆಗಳನ್ನು ಈಡೇರಿಸೋದಾಗಿ ಭರವಸೆ ನೀಡಿದ್ರು. ಸರ್ಕಾರದ ಭರವಸೆ ಹಿನ್ನೆಲೆ ಬಿಬಿಎಂಪಿ ನೌಕರರು ಪ್ರತಿಭಟನೆಯನ್ನ ಅಂತ್ಯಗೊಳಿಸಿದ್ದಾರೆ.