ಬಿಬಿಎಂಪಿ ವ್ಯಾಪ್ತಿಯಲ್ಲಿ KPTCL ಹೈಟೆಂನ್ಷನ್ ಲೈನ್ ಕೇಳಗೆ ಮಸೀದಿ ನಿರ್ಮಾಣ ಮಾಡಲಾಗ್ತಿದೆ.ಆದ್ರು ಕ್ರಮಕೈಗೊಳ್ಳದೇ ಬಿಬಿಎಂಪಿ ಅಧಿಕಾರಿಗಳು ಸುಮ್ಮನೆ ಕುಳಿತ್ತಿದ್ದಾರೆ.ಈ ಹಿನ್ನಲೆ ಬಿಬಿಎಂಪಿ ಕಮೀಷನರ್ ಗೆ ಮಸೀದಿ ತೆರವುಮಾಡುವಂತೆ ಇಂದು ಬೆಳಿಗ್ಗೆ 10 ಗಂಟೆಗೆ ಬಿಬಿಎಂಪಿ ಕಚೇರಿಯಲ್ಲಿ ಹಿಂದೂ ಪರ ಸಂಘಟನೆಗಳು ಮನವಿ ಸಲ್ಲಿಸಿದ್ದಾರೆ.
ಇನ್ನೂ ಇದೆ ವೇಳೆ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ಅಧ್ಯಕ್ಷ ಮೋಹನ್ ಗೌಡ KPTCL ಹೈ-ಟೆಂನ್ಷನ್ ಲೈನ್ ಕೆಳಗೆ ಯಾವುದೇ ಕಾಮಗಾರಿ ನಡೆಸುವಂತಿಲ್ಲ.ಆದ್ರು ಬಿಬಿಎಂಪಿ ವ್ಯಾಪ್ತಿಯ ಎಲೆಕ್ಟ್ರಾನಿಕ್ ಸಿಟಿಯ ಬಳಿ ಇರುವ ಸಿಂಗಸಂದ್ರದಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣವಾಗುತ್ತಿದೆ.
ಹೈ- ಟೆಂನ್ಷನ್ ಲೈನ್ ಕೆಳಗೆ ಯಾವುದೇ ಕಾಮಗಾರಿ ನಡೆಸುವುದು ಸುರಕ್ಷತಾ ದೃಷ್ಟಿಯಿಂದ ಸರಿಯಲ್ಲ.ಆದ್ರು ಸಿಂಗಸಂದ್ರದಲ್ಲಿ 3-4 ಅಂತಸ್ತಿನ ಅಕ್ರಮ ಮಸೀದಿ ನಿರ್ಮಾಣ ಮಾಡಲಾಗುತ್ತಿದೆ.ಅಲ್ಲಿನ ಸ್ಥಳಿಯರು ದೂರು ಸಲ್ಲಿಸಿದ್ರು ಬಿಬಿಎಂಪಿ, ಬೆಸ್ಕಾಂ , kptcl ಅಥವಾ ರಾಜ್ಯಸರ್ಕಾರವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ.ಇದನ್ನು ಈ ಕೂಡಲೇ ತೆರವು ಮಾಡಬೇಕು.ರಾಜ್ಯಸರ್ಕಾರ ಬೆಂಗಳೂರಲ್ಲಿ ಇರುವ ಹಿಂದೂ ದೇವಸ್ಥಾನಗಳನ್ನ ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ ಎಂದು ಈಗಾಗಲೇ ಸಾವಿರಾರು ದೇವಸ್ಥಾನಗಳನ್ನ ತೆರವು ಮಾಡಿದೆ.ಆದ್ರೆ ಅನ್ಯ ಧರ್ಮಿಯರ ದೇವಸ್ಥಾನಗಳು ಅಕ್ರಮವಾಗಿ ನಿರ್ಮಾಣವಾಗಿದ್ರು .ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇರುವುದು ದುರದೃಷ್ಟಕರ ಸಂಗತಿಯಾಗಿದೆ.