Select Your Language

Notifications

webdunia
webdunia
webdunia
webdunia

ಹೆಸರಿಗಷ್ಟೇ ಪರಿಹಾರ ಘೋಷಿಸಿದ್ದ ಬಿಬಿಎಂಪಿ

ಬಿಬಿಎಂಪಿ
ಬೆಂಗಳೂರು , ಮಂಗಳವಾರ, 19 ಅಕ್ಟೋಬರ್ 2021 (15:48 IST)
ಸಿಲಿಕಾನ್ ಸಿಟಿಯಲ್ಲಿ ಸುರುದ ಭಾರಿ ಮಳೆಗೆ ಹಲವು ಮನೆಗಳಿಗೆ ಅಪಾರ ಹಾನಿಯಾಗಿತ್ತು. ಸಂತ್ರಸ್ತರಿಗೆ , ನಷ್ಟ ಉಂಟಾದವರಿಗೆ ಬಿಬಿಎಂಪಿಯಿಂದ ಪರಿಹಾರ ಘೋಷಿಸಿದ್ದು, ಇದುವರೆಗೆ ಯಾರಿಗೂ ಪರಿಹಾರ ಲಭ್ಯವಾಗಿಲ್ಲ ಎಂದು ಹೇಳಲಾಗಿದೆ. ಇನ್ನುಹಾನಿಯಾದವರಿಗೆ ಪ್ರಮಾಣ ಪತ್ರವನ್ನೂ ಮಾತ್ರ ಬಿಬಿಎಂಪಿ ನೀಡಿದೆ.ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ, ಗೋವಿಂದರಾಜ ನಗರ ಕ್ಷೇತ್ರದ ಒಟ್ಟು 717 ಜನ ಸಂತ್ರಸ್ತರ ಪಟ್ಟಿಯನ್ನು ತಯಾರಿಸಲಾಗಿತ್ತು. ಅವರಿಗೆ ತಲಾ 10 ಸಾವಿರ ರೂಪಾಯಿ ಪರಿಹಾರವನ್ನು ಬಿಬಿಎಂಪಿ ಘೋಷಣೆ ಮಾಡಿತ್ತು. ಆದರೆ ಈವರೆಗೂ ಯಾರಿಗೂ ಪರಿಹಾರ ಸಿಕ್ಕಿಲ್ಲ. ಅದಲ್ಲದೆ ಬಿಬಿಎಂಪಿ ಸಿದ್ಧಪಡಿಸಿದ ಪಟ್ಟಿಯಲ್ಲಿರುವ ಸಂತ್ರಸ್ತರಿಗೆ ಹಂಚಲೆಂದು 71,70,000 ರೂಪಾಯಿ ಅನುದಾನಕ್ಕೆ ಅನುಮೋದನೆ ನೀಡಲಾಗಿತ್ತು.
ಬಿಬಿಎಂಪಿ

Share this Story:

Follow Webdunia kannada

ಮುಂದಿನ ಸುದ್ದಿ

ದಸರಾ ರಜೆ ವಿಧಾನಸೌಧ ಖಾಲಿ