Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ರೈತ ನಾಯಕ ಪ್ರೊ. ನಂಜುಂಡ ಸ್ವಾಮಿಯವರ ಚಿಂತನೆಯನ್ನೊಳಗೊಂಡ ಬಾರುಕೋಲು ಪುಸ್ತಕವನ್ನು ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸದಲ್ಲಿ ಬಿಡುಗಡೆ ಮಾಡಲಾಯಿತು. ಪುಸ್ತಕ ಬಿಡುಗಡೆ ನಂತರ ಸಿದ್ದರಾಮಯ್ಯ ನಂಜುಂಡ ಸ್ವಾಮಿಯವರು ಬಳಸುತ್ತಿದ್ದ ಬಾರುಕೋಲನ್ನ ಕೈಯಲ್ಲಿ ಹಿಡಿದುಕೊಂಡು ಆತ್ಮೀಯವಾಗಿ ಅದನ್ನ ನೋಡಿದ್ರು. ಇದನ್ನ ಸರ್ಕಾರದ ವಿರುದ್ಧ ಬೀಸುತ್ತೇನೆ ಎಂದು ಎರಡು ಬಾರಿ ಬಾರುಕೋಲು ಬೀಸಿದ್ರು. ಈ ವೇಳೆ ಸಿದ್ದರಾಮಯ್ಯನವರು ಬಾರುಕೋಲನ್ನು ಹೆಗಲಿಗೆ ಹಾಕಿಕೊಂಡು ಪೋಸ್ ಕೊಟ್ಟರು. ನಂಜುಂಡ ಸ್ವಾಮಿ ಯಾವಾಗಲೂ ಸರ್ಕಾರದ ವಿರುದ್ಧ ಬಾರುಕೋಲು ಚಳುವಳಿ ಎನ್ನುತ್ತಿದ್ದರು ಎಂದು ನೆನಪಿಸಿಕೊಂಡರು.