ಇದೇನು ನಮ್ಮ ಪಿತ್ರಾರ್ಜಿತ ಆಸ್ತಿಯಲ್ಲ. ನಾವು ಹೊತ್ತುಕೊಂಡು ಹೋಗುವುದು ಏನು ಇಲ್ಲ. ಇದಕ್ಕೆ ಕಣ್ಣೀರು ಯಾಕೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಡ್ಯದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಮತ ಕೊಟ್ಟು ಗೆಲ್ಲಿಸಿದರೆ ಅಧಿಕಾರ ಮಾಡುತ್ತೇವೆ. ಇಲ್ಲದಿದ್ದರೆ ಇಲ್ಲ. ಜನರಾಗಲಿ, ಅಧಿಕಾರವಾಗಲಿ ಯಾವುದೂ ಶಾಶ್ವತವಲ್ಲ ಎಂದರು.
ಇದೇ ವೇಳೆ ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಅವರು ೪೦ ಪರ್ಸೆಂಟ್ ಸರಕಾರ ದೇವರನ್ನೂ ಸ್ವಾಮೀಜಿಗಳನ್ನು ಬಿಡುವುದಿಲ್ಲ. ಇವರು ಹೇಗೆ ಹಿಂದೂಗಳ ಪರ ಅಂತಾರೆ ಎಂದು ಪ್ರಶ್ನಿಸಿದರು.
ಮಠಗಳಿಗೆ ನೀಡುವ ಅನುದಾನದಲ್ಲೂ ಶೇ.೩೦ ಪರ್ಸೆಂಟೆಜ್ ಕೇಳ್ತಾರೆ. ಈಗಾಗಲೇ ಗುತ್ತಿಗೆದಾರರು ಶೇ.೪೦ರ ಪರ್ಸೆಂಟ್ ಕೇಳ್ತಾರೆ ಅಂತ ಮೋದಿಗೆ ಕಂಪ್ಲೇಟ್ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮೋದಿ ಅವರ ಅಚ್ಚೇ ದಿನ್ ಅಂದರೆ ಇದೇನಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.