Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬಾಕಿ ಉಳಿದ ಸೆಮಿಸ್ಟರ್ ಪರೀಕ್ಷೆ ವೇಳಾಪಟ್ಟಿ ಕೂಡ ಬಿಡುಗಡೆ ಮಾಡಿ, ಪ್ರಕಟಣೆ ಹೊರಡಿಸಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಮುಂದೂಡಲಾದ ಪದವಿ ಪರೀಕ್ಷೆಗಳು ಆಗಸ್ಟ್ 10ರಿಂದ ಆರಂಭಗೊಳ್ಳಲಿದ್ದು, ಆ. 31ರೊಳಗೆ ಬಾಕಿ ಉಳಿದಿರುವ ಎಲ್ಲ ಪದವಿ ಪರೀಕ್ಷೆಗಳು ನಡೆಲಾಗುತ್ತದೆ.
ಆ.28 ರಿಂದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ. ಇದರ ಫಲಿತಾಂಶವನ್ನು ಸೆಪ್ಟೆಂಬರ್ 20ರೊಳಗೆ ಪ್ರಕಟಿಸಿ, ಸ್ನಾತಕೋತ್ತರ ಪದವಿಗೆ ಅನುವು ಮಾಡಿಕೊಡಲಾಗುತ್ತಿದೆ.ಸ್ನಾತಕೋತ್ತರ 2ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಫಲಿತಾಂಶವನ್ನು ಆಂತರಿಕ ಅಂಕಗಳು ಹಾಗೂ ಹಿಂದಿನ ಸೆಮಿಸ್ಟರ್ ಅಂಕ ಆಧರಿಸಿ ಪ್ರಕಟಿಸಲಾಗುತ್ತದೆ. ಅಂತಿಮ ವರ್ಷದ ಸ್ನಾತಕೋತ್ತರ ಪರೀಕ್ಷೆಯನ್ನು ಆಗಸ್ಟ್ 2ನೇ ವಾರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.2021-22ನೇ ಶೈಕ್ಷಣಿಕ ವರ್ಷ ಅಕ್ಟೋಬರ್ 1ರಿಂದ ಆರಂಭವಾಗಲಿದೆ ಎಂದು ವಿವಿ ಪ್ರಕಟಣೆ ಹೊರಡಿಸಿದೆ.