ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮಂಗಳವಾರ ಭೇಟಿ ಮಾಡಲು ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಾಧು ಸಂತರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಸುಮಾರು ಮೂನ್ನೂರರಿಂದ ನಾನೂರು ಸಾಧು ಸಂತರನ್ನು ಸೇರಿಸಿ ಮಂದಿಯನ್ನು ಭೇಟಿ ಮಾಡಿ ಸಿಎಂ ಬದಲಾವಣೆ ಕುರಿತು ಚರ್ಚಿಸಲಿದ್ದೇವೆ ಎಂದರು.
ಮುಖ್ಯಮಂತ್ರಿ ಬದಲಾವಣೆ ಖಚಿತ ಅನ್ನುವುದಾದರೆ ವೀರೇಶ್ವರ ಲಿಂಗಾಯತ ಸಮಾಜದವರನ್ನು ಹೊರತು ಪಡಿಸಿ ಬೇರೆಯವರನ್ನು ಸಿಎಂ ಮಾಡಬಾರದು. ಮುರುಗೇಶ್ ನಿರಾಣಿ, ಬಸವರಾಜ ಬೊಮ್ಮಾಯಿ ಮತ್ತು ಅರವಿಂದ ಬೆಲ್ಲದ್ ಅವರನ್ನು ಸಿಎಂ ಮಾಡಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ವೀರಶೈವ ಲಿಂಗಾಯತ ಸಮುದಾಯರವರ ಬೆಂಬಲದಿಂದ ಮಾತ್ರ ಸಾಧ್ಯ. ಆದ್ದರಿಂದ 5 ಬಾರಿ ಗೆದ್ದಿರುವ ಬಸವರಾಜ್ ಬೊಮ್ಮಾಯಿ ಅವರಿಗೂ ಅನುಭವವಿದೆ. ಅರವಿಂದ ಬೆಲ್ಲದ್ ಇಂಜಿನಿಯರ್ ಇದ್ದಾರೆ. ಮುರುಗೇಶ್ ನಿರಾಣಿ ಸಹ ಉದ್ಯಮಿಯಾಗಿ ಅನುಭವವಿದೆ ಎಂದು ಅವರು ಹೇಳಿದರು.
ಒಂದು ವೇಳೆ ನಮ್ಮ ಸಮಾಜದವರನ್ನ ಮುಖ್ಯ ಮಂತ್ರಿ ಮಾಡದಿದ್ದರೆ .ಅಖಿಲ ಭಾರತ ಸಾದು ಸಂತರ ಸಂಘದಿಂದ ಹೋರಾಟ ಮಾಡಲಾಗುವುದು. ಮುಂದಿನ ವಾರ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೇಟಿ ರಾಜ್ಯದ ವೀರಶೈವ ಲಿಂಗಾಯತ ಸ್ವಾಮೀಜಿ ಅವರ ಅಭಿಪ್ರಾಯ ತಿಳಿಸುವುದಾಗಿ ಶಾಂತವೀರ ಸ್ವಾಮೀಜಿ ಹೇಳಿದರು.