Publish Date: Wed, 17 May 2023 (20:08 IST)
Updated Date: Wed, 17 May 2023 (18:31 IST)
ನನಗೆ ಹೈಕಮಾಂಡ್‌ನಿಂದ ಯಾವುದೇ ಬುಲಾವ್ ಬಂದಿಲ್ಲ..ಬೆಂಗಳೂರಿನಲ್ಲೇ ಇದ್ದೇನೆ ಅಂತ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ರು.. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜಾತಿ ಆಧಾರದಲ್ಲಿ ಕಾಂಗ್ರೆಸ್ ಸಿಎಂ ಮಾಡೋದಿಲ್ಲ.. ಸಾಮರ್ಥ್ಯ ಅಳೆದು ರಾಜ್ಯದ ಮುಖ್ಯಮಂತ್ರಿ ಮಾಡುತ್ತಾರೆ...ಈ ಮೊದಲು ನಾನು ಅಧಿಕಾರದಲ್ಲಿ ಇದ್ದಾಗ ಡಿಸಿಎಂ ಹುದ್ದೆಯನ್ನ ಸಮರ್ಥವಾಗಿ ನಿಭಾಯಿಸಿದ್ದೆ..ಮುಖ್ಯಮಂತ್ರಿ ಆಯ್ಕೆ ನಿಚಾರದಲ್ಲಿ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ರು.