ದಕ್ಷಿಣಕನ್ನಡ: ಬಾಬ್ರಿ ಮಸೀದಿ ದ್ವಂಸ ಪ್ರಕರಣ ನಡೆದು ಇಂದಿಗೆ 25 ವರ್ಷವಾಗಿದೆ. ಆದ ಕಾರಣ ಇಂದು ದಕ್ಷಿಣಕನ್ನಡ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಬಾಬ್ರಿ ಮಸೀದಿ ದ್ವಂಸ ಮಾಡಿದ ಪ್ರಕರಣ ನಡೆದು ಇಂದಿಗೆ 25 ವರ್ಷಗಳು ಉರುಳಿದ ಕಾರಣ ನಾಲ್ಕು ತಾಲೂಕುಗಳಲ್ಲಿ ಪುತ್ತೂರು ಸೇರಿದಂತೆ,ಸುಳ್ಯ,ಬಂಟ್ವಾಳ,ಬೆಳ್ತಂಗಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಎಸ್.ಡಿ.ಪಿ.ಐ. ಹಾಗೂ ಹಿಂದು ಸಂಘಟನೆಗಳಿಂದ ಪ್ರತ್ಯಕ ಸಭೆ ನಡೆಯಲಿದೆ. ಅಯೋಧ್ಯೆಯಲ್ಲಿ ಗಲಾಟೆಗಳು ನಡೆಯದಂತೆ ಬಿಗಿ ಬಂದೋಬಸ್ತು ಮಾಡಲಾಗಿದೆ.
ಬೆಳ್ಳಿಗ್ಗೆ 6ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿದ್ದು ಯಾವುದೇ ರೀತಿಯ ಬಹಿರಂಗ ಸಭೆ, ಮೆರವಣಿಗೆಗಳು ನಡೆಯಬಾರದು ಎಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ