ಬೆಂಗಳೂರು: ದೇವಾಲಯಗಳಿಂದ ಸಂಗ್ರಹವಾದದ ಹಣವನ್ನು ಮಸೀದಿ, ಚರ್ಚ್ ಗಳಿಗೆ ನಯಾ ಪೈಸೆ ನೀಡಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವುದೆಲ್ಲಾ ಸುಳ್ಳು ಸುದ್ದಿ ಎಂದು ಮುಜರಾಯಿ ಇಲಾಖೆ ಸಚಿವ ರುದ್ರಪ್ಪ ಲುಮಾಣಿ ಹೇಳಿದ್ದಾರೆ.
ಪದೇ ಪದೇ ದೇಗುಲಗಳ ಹಣವನ್ನು ಸರ್ಕಾರ ಮಸೀದಿ, ಚರ್ಚ್ ಗಳಿಗೆ ನೀಡುತ್ತಿದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸರ್ಕಾರಕ್ಕೆ ಮಸಿ ಬಳಿಯುವ ತಂತ್ರವಷ್ಟೇ. ಇದರಲ್ಲಿ ಸತ್ಯಾಂಶವಿಲ್ಲ ಎಂದು ಅವರು ಹೇಳಿದ್ದಾರೆ.
ಇಲಾಖೆಗೆ ವರ್ಷಕ್ಕೆ 55 ಕೋಟಿ ರೂ ಅನುದಾನ ಬರುತ್ತದೆ. ಮುಜರಾಯಿ ಇಲಾಖೆಯ ದೇವಾಲಯಗಳನ್ನು ಸಮಿತಿಗಳಿಗೆ ಒಪ್ಪಿಸಲಾಗಿದೆ. ದೇವಾಲಯಗಳಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ