Publish Date: Tue, 05 May 2020 (16:43 IST)
Updated Date: Tue, 05 May 2020 (16:45 IST)
ಲಾಕ್ ಡೌನ್ ಅಂಗವಾಗಿ ಸ್ಥಗಿತಗೊಳಿಸಲಾಗಿದ್ದ ಆಟೋ ಸಂಚಾರಕ್ಕೆ ಮತ್ತೆ ಅನುಮತಿ ನೀಡಲಾಗಿದೆ.
ಚಿತ್ರದುರ್ಗ ನಗರದಲ್ಲಿ ಆಟೋ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್ ಸೋಂಕಿನ ಪ್ರಸರಣ ತಡೆಗಟ್ಟುವ ಹಿನ್ನಲೆಯಲ್ಲಿ ಆಟೋ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
ಜಿಲ್ಲೆಯ ಮೂರು ನಗರಸಭೆ ವ್ಯಾಪ್ತಿಯಲ್ಲಿ ಮತ್ತು ಮೂರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಆಟೋ ಸೇವೆಗೆ ಜಿಲ್ಲಾಡಳಿತ ಒಪ್ಪಿಗೆ ನೀಡಿದೆ.
ನಿಮಯದಂತೆ ಆಟೋದಲ್ಲಿ ಇಬ್ಬರು ಮಾತ್ರ ಪ್ರಯಾಣಿಸುವಂತೆ ಷರತ್ತು ಹಾಕಲಾಗಿದ್ದು, ಆಟೋ ಡ್ರೈವರ್ ಮಾಸ್ಕ್ ಹಾಕುವುದು ಕಡ್ಡಾಯ.