ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಸೇರಿದಂತೆ ದಿನನಿತ್ಯದ ವಸ್ತುಗಳ ಬೆಲೆ ದಿನೇದಿನೇ ಗಗನಮುಖಿಯಾಗುತ್ತಿರುವ ಈ ಹೊತ್ತಿನಲ್ಲಿ, ಆಟೋ ಪ್ರಯಾಣ ದರವನ್ನೂ ಹೆಚ್ಚಳ ಮಾಡಲಾಗಿದೆ.
ಗ್ಯಾಸ್ ದರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಆಟೋ ಪ್ರಯಾಣ ದರವನ್ನು ಹೆಚ್ಚಳ ಮಾಡುವಂತೆ ಆಟೋ ಚಾಲಕರು ಮಾಡಿಕೊಂಡಿರುವ ಮನವಿಯನ್ನು ನಗರ ಜಿಲ್ಲಾಧಿಕಾರಿ ಮತ್ತು ರಾಜ್ಯ ಸಾರಿಗೆ ಇಲಾಖೆ ಪುರಸ್ಕರಿಸಿದೆ.ಡಿಸೆಂಬರ್ 1ರಿಂದ (ಬುಧವಾರ) ಆಟೋ ಪ್ರಯಾಣ ದರ ಹೆಚ್ಚಳವಾಗಲಿದೆ.
ಈಗ ಇರುವ ಕನಿಷ್ಠ ದರವನ್ನು 25 ರೂಪಾಯಿಯಿಂದ 30 ರೂಪಾಯಿಗೆ ಏರಿಸಲಾಗಿದೆ. ಅರ್ಥಾತ್ ಮೊದಲ ಎರಡು ಕಿಲೋಮೀಟರ್ ವರೆಗೆ ಕನಿಷ್ಠ 30 ರೂಪಾಯಿ ಪಾವತಿ ಮಾಡಬೇಕಿದೆ. ನಂತರದ ಪ್ರತಿ ಒಂದು ಕಿಲೋ ಮೀಟರ್ಗೆ 15 ರೂ. ದರವನ್ನು ನಿಗದಿ ಮಾಡಲಾಗಿದೆ. ಸದ್ಯ ಈ ದರವು ಪ್ರತಿ
ಕಿಲೋಮೀಟರ್‌ಗೆ 13 ರೂಪಾಯಿ ಇದೆ.