ಕೋಲ್ಕೊತಾ : ಆಟೋ ಚಾಲಕರು ಗರ್ಭಿಣಿಯರಿಗೆ, ಕಷ್ಟದಲ್ಲಿರುವವರಿಗೆ ಉಚಿತವಾಗಿ 'ಆಟೋ ಸೇವೆ' ಮೂಲಕ ಸಾಮಾಜಿಕ ಕಳಕಳಿ, ಮಾನವೀಯತೆ ಮೆರೆಯುವುದನ್ನು ಕೇಳಿದ್ದೇವೆ.
ಆದರೆ, ಪಶ್ಚಿಮ ಬಂಗಾಳದಲ್ಲೊಬ್ಬ ಆಟೋ ಚಾಲಕ ಜನರ ಸಾಮಾನ್ಯ ಜ್ಞಾನ ಹೆಚ್ಚಿಸಲು ಒತ್ತು ನೀಡುತ್ತಿದ್ದಾರೆ. ತಮ್ಮ ಆಟೋ ಹತ್ತುವ ಪ್ರಯಾಣಿಕರಿಗೆ 15 ಪ್ರಶ್ನೆ ಕೇಳುತ್ತಾರೆ.
ಎಲ್ಲ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರೆ, ಪ್ರಯಾಣ ವೆಚ್ಚ ಎಷ್ಟೇ ಆಗಿದ್ದರೂ ಅವರಿಂದ ಹಣ ಸ್ವೀಕರಿಸುವುದಿಲ್ಲ. ಹೌರಾ ಜಿಲ್ಲೆಯ ಲಿಲುವಾದಲ್ಲಿ ಇ-ಆಟೋ ಓಡಿಸುವ ಸುರಂಜನ್ ಕರ್ಮಾಕರ್ 'ಕ್ವಿಜ್ ಮಾಸ್ಟರ್' ಎಂದೇ ಪ್ರಯಾಣಿಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರ ಕುರಿತು ಸಂಕಲನ್ ಸರಕಾರ್ ಎಂಬುವವರು ಫೇಸ್ಬುಕ್ನಲ್ಲಿ ಬರೆದಿದ್ದಾರೆ.