Publish Date: Tue, 06 Dec 2022 (18:08 IST)
Updated Date: Tue, 06 Dec 2022 (18:10 IST)
ಬುದ್ದಿ ಹೇಳಿದ ಯುವಕರ ಮೇಲೆ ಕಾರು ಹತ್ತಿಸಿ ಕೊಲೆ ಯತ್ನ ಮಾಡಿರುವ ಘಟನೆ ಮೈಸೂರಿನ ಸರಸ್ವತಿ ಪುರಂನಲ್ಲಿ ನಡೆದಿದೆ. ಪ್ರಜ್ವಲ್, ರಾಹುಲ್, ಆನಂದ್ ಎಂಬುವವರ ಮೇಲೆ ಕಾರು ಹತ್ತಿಸಲು ಪ್ರಯತ್ನಿಸಿ ಹಲ್ಲೆ ಮಾಡಲಾಗಿದೆ. ಟಿ.ಕೆ. ಬಡಾವಣೆಯ ಜಂಕ್ಷನ್ನಲ್ಲಿ ಫಾರ್ಚುನರ್ ಕಾರು ವೇಗವಾಗಿ ಬಂದು ಮೂರು ಜನ ಯುವಕರಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಯುವಕರು ಪ್ರಶ್ನೆ ಮಾಡಿದ್ದಕ್ಕೆ ಫಾರ್ಚುನರ್ ಕಾರಿನಲ್ಲಿದ್ದ ವಾಸು ಹಾಗೂ ಅವರ ಪುತ್ರ ದರ್ಶನ್ ಆ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ. ಅಪ್ಪ ಮಗನ ದರ್ಪಕ್ಕೆ 3 ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಗಾಯಾಳು ಪ್ರಜ್ವಲ್ ಸ್ಥಿತಿ ಚಿಂತಾಜನಕವಾಗಿದೆ. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ಅಪ್ಪ-ಮಗನ ವಿರುದ್ದ ಕ್ರಮ ತೆಗೆದುಕೊಳ್ಳಲು ಪೊಲೀಸರು ಮೀನಾಮೇಷ ಎಣಿಸುತ್ತಿದ್ದಾರೆ.
geetha
Publish Date: Tue, 06 Dec 2022 (18:08 IST)
Updated Date: Tue, 06 Dec 2022 (18:10 IST)