ಅಕ್ರಮವಾಗಿ ರಾಸಾಯನಿಕ ಗೊಬ್ಬರ ಮಾರಾಟ ಮಾಡುತ್ತಿದ್ದ ಮಳಿಗೆ ಮೇಲೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ದಾಳಿ ಮಾಡಿದ್ದಾರೆ. ತುಮಕೂರು ಜಿಲ್ಲೆ ಪಾವಗಡ ಪಟ್ಟಣದಲ್ಲಿ ದಾಳಿ ನಡೆದಿದ್ದು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪುಟ್ಟರಂಗಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ರೇಖಾ ಆಗ್ರೋ ಸರ್ವಿಸಸ್ ಕೀಟನಾಶಕ ಎಂಬ ಮಳಿಗೆ ಮೇಲೆ ದಾಳಿ ಮಾಡಿದ್ದಾರೆ. ಮಳಿಗೆಯಲ್ಲಿ ಅನುಮತಿ ಇಲ್ಲದ ಬ್ರೋನೋಪೋಲ್, ಬ್ರೋರಾನ್2, ನೈಟ್ರೋಪೇನ್ 1, ಡಿಯೋಲ್ ರಸಗೊಬ್ಬರವನ್ನ ಮಾರಾಟ ಮಾಡಲಾಗುತ್ತಿತ್ತು ಎಂದು ಪುಟ್ಟರಂಗಪ್ಪ ತಿಳಿಸಿದ್ದಾರೆ. ದಾಳಿಯಲ್ಲಿ 2,204 ಕೆಜಿ ರಸಗೊಬ್ಬರವನ್ನ ಜಪ್ತಿ ಮಾಡಿಕೊಳ್ಳಲಾಗಿದೆ. 1,56,500 ರೂಪಾಯಿ ಮೌಲ್ಯದ ಅನುಮತಿ ಇಲ್ಲದ ರಸಗೊಬ್ಬರವನ್ನ ಮಾಲೀಕ ಮಾರಾಟ ಮಾಡಿದ್ದಾನೆ. ಮಳಿಗೆ ಮಾಲೀಕರ ವಿರುದ್ಧ ಕೀಟನಾಶಕ ಕಾಯ್ದೆ 1968ರ ಅಡಿಯಲ್ಲಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.