Publish Date: Fri, 10 Feb 2023 (16:50 IST)
Updated Date: Fri, 10 Feb 2023 (16:53 IST)
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡ ಪಾವತಿಗೆ ಶೇಕಡ 50ರಷ್ಟು ರಿಯಾಯಿತಿ ಅವಧಿ ಮುಕ್ತಾಯಕ್ಕೆ ಮೂರು ದಿನಗಳು ಮಾತ್ರ ಬಾಕಿ ಇದ್ದು, ಬುಧವಾರ .9.06 ಕೋಟಿ ದಂಡ ಸಂಗ್ರಹವಾಗಿದೆ. ಇದರೊಂದಿಗೆ ಆರು ದಿನಗಳಲ್ಲಿ 18 ಲಕ್ಷ ಪ್ರಕರಣಗಳು ಇತ್ಯರ್ಥವಾಗಿ 51 ಕೋಟಿ ದಂಡ ಸಂಗ್ರಹವಾಗಿದೆ. ಸಂಚಾರ ಉಲ್ಲಂಘನೆ ಸಂಬಂಧ ಹಳೇ ಪ್ರಕರಣಗಳಲ್ಲಿ ದಂಡ ಪಾವತಿಗೆ ಶೇ.50 ರಿಯಾಯಿತಿ ನೀಡಿ ಸಾರಿಗೆ ಇಲಾಖೆಗೆ ಆದೇಶಿಸಿತ್ತು. ಇದಕ್ಕೆ ಜನರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫೆ.3ರಂದು 2.24 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡು 7 ಕೋಟಿ ದಂಡ ಸಂಗ್ರಹವಾಗಿತ್ತು. ಇದಾದ ಬಳಿಕ ದಂಡ ಸಂಗ್ರಹ ಏರುಗತಿಯಲ್ಲೇ ಸಾಗಿದ್ದು, ಬುಧವಾರ ಕೂಡ 3.23 ಲಕ್ಷ ಪ್ರಕರಣಗಳ ಸಂಬಂಧ ಸರ್ಕಾರದ ಖಜಾನೆಗೆ 9.06 ಕೋಟಿ ಪಾವತಿಯಾಗಿದೆ.