Publish Date: Tue, 26 Mar 2019 (14:20 IST)
Updated Date: Tue, 26 Mar 2019 (14:22 IST)
ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಸಂಸದ ಕೆ.ಎಚ್.ಮುನಿಯಪ್ಪ ಅತ್ಯಂತ ಸಿರಿವಂತರಾಗಿದ್ದಾರೆ.
ಕೆ.ಎಚ್.ಮುನಿಯಪ್ಪಗಿಂತ ಪತ್ನಿ ನಾಗರತ್ನಮ್ಮ ಸಿರಿವಂತೆಯಾಗಿದ್ದಾರೆ. ಕೆ.ಎಚ್.ಮುನಿಯಪ್ಪ 96.35 ಲಕ್ಷ ರುಪಾಯಿ ಚರಾಸ್ತಿ ಹೊಂದಿದ್ದರೆ, ಪತ್ನಿ ನಾಗರತ್ನಮ್ಮ ಬಳಿ 3.45 ಕೋಟಿ ರುಪಾಯಿ ಚರಾಸ್ತಿ ಇದೆ.
ಕೆ.ಎಚ್.ಮುನಿಯಪ್ಪ ಬಳಿ 8.50 ಕೋಟಿ ಸ್ಥಿರಾಸ್ತಿ ಇದ್ದರೆ, ಪತ್ನಿ ಹೆಸರಿನಲ್ಲಿ 14.11 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ.
ಕೆ.ಎಚ್.ಮುನಿಯಪ್ಪ ಹೆಸರಿನಲ್ಲಿ 8 ಎಕರೆ 18 ಗುಂಟೆ ಜಮೀನು ಇದೆ. ಪತ್ನಿ ನಾಗರತ್ನಮ್ಮ ಹೆಸರಿನಲ್ಲಿ 243 ಎಕರೆ 2 ಗುಂಟೆ ಜಮೀನು ಇದೆ. ಕೆ.ಎಚ್.ಮುನಿಯಪ್ಪ ಕೈಯಲ್ಲಿ 15.75 ಲಕ್ಷ ನಗದು ಇದ್ದರೆ, ಪತ್ನಿ ನಾಗರತ್ನಮ್ಮ 1.22 ಲಕ್ಷ ರೂಗಳ ನಗದು ಹೊಂದಿದ್ದಾರೆ. ಕೆ.ಎಚ್.ಮುನಿಯಪ್ಪರ ಬಳಿ ಇನ್ನೋವ ಕಾರು, 3 ಲಕ್ಷ ಮೌಲ್ಯದ 100 ಗ್ರಾಂ ಚಿನ್ನವಿದೆ. ಪತ್ನಿಯ ಬಳಿ 865 ಗ್ರಾಂ ಚಿನ್ನಾಭರಣ ಮತ್ತು 2.49 ಲಕ್ಷ ಮೌಲ್ಯದ 6 ಕೆಜಿ ಬೆಳ್ಳಿ ಆಭರಣಗಳಿವೆ. 14.37 ಕೋಟಿ ರೂಪಾಯಿ ಸಾಲವನ್ನ ಕೆ.ಎಚ್.ಮುನಿಯಪ್ಪ, ಪತ್ನಿ ನಾಗರತ್ನಮ್ಮ ವಿವಿಧ ಬ್ಯಾಂಕ್ ಗಳಿಂದ ಮಾಡಿಕೊಂಡಿದ್ದಾರೆ.
ನಾಗರತ್ನಮ್ಮ ತನ್ನ ಸೊಸೆ ಶ್ರುತಿಶ್ರೀಯವರಿಂದಲೇ 3.45 ಕೋಟಿ ರುಪಾಯಿ ಗಳ ಸಾಲ ಮಾಡಿದ್ದಾರೆ.
ಗಂಡ ಕೆ.ಎಚ್.ಮುನಿಯಪ್ಪರಿಂದ 30.37 ಲಕ್ಷ ರೂಗಳ ಸಾಲ ಮಾಡಿದ್ದಾರೆ. ಇನ್ನು ಕೆ.ಎಚ್.ಮುನಿಯಪ್ಪ ಮೇಲೆ ಅಟ್ರಾಸಿಟಿ ಪ್ರಕರಣ ಕೂಡಾ ಇದೆ. ಹೀಗಂತ ಚುನಾವಣೆಗೆ ಸಲ್ಲಿಸಿರುವ ನಾಮಪತ್ರದಲ್ಲಿ ಅವರು ನಮೂದಿಸಿದ್ದಾರೆ.