ದುಬೈ: ಐಸಿಸಿಯಲ್ಲಿ ಉಭಯ ದೇಶಗಳ ನಡುವಿನ ಕ್ರಿಕೆಟ್ ಸರಣಿಗೆ ಸಂಬಂಧಿಸಿದ ಒಪ್ಪಂದ ಉಲ್ಲಂಘನೆ ಪ್ರಕರಣದಲ್ಲಿ ಸೋಲು ಅನುಭವಿಸಿದ ಪಾಕ್ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರತೀಯ ಕ್ರಿಕೆಟ್ ಮಂಡಳಿಗೆ ದಂಡ ಪಾವತಿ ಮಾಡಿದೆ.
ಕ್ರಿಕೆಟ್ ಸರಣಿ ಒಪ್ಪಂದದ ಪ್ರಕಾರ ನಡೆಯದೇ ಇದ್ದಿದ್ದರಿಂದ ನಮಗೆ 70 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟ ಪಾವತಿ ಮಾಡಬೇಕೆಂದು ಬಿಸಿಸಿಐ ವಿರುದ್ಧ ಪಿಸಿಬಿ ಕಳೆದ ವರ್ಷ ಐಸಿಸಿಗೆ ದೂರು ಸಲ್ಲಿಸಿತ್ತು.
ಈ ಪ್ರಕರಣದಲ್ಲಿ ಪಿಸಿಬಿ ಹಿನ್ನಡೆ ಅನುಭವಿಸಿತ್ತು. ಈ ಹಿನ್ನಲೆಯಲ್ಲಿ ಕೇಸಿನ ವಿಚಾರಣೆ, ಕಾನೂನು ಕ್ರಮಗಳಿಗೆ ಬಿಸಿಸಿಐಗೆ ಖರ್ಚಾಗಿದ್ದ ಮೊತ್ತವನ್ನು ಪಿಸಿಬಿ ದಂಡದ ರೂಪದಲ್ಲಿ ಪಾವತಿಸಿದೆ. ಸುಮಾರು 1.6 ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ಬಿಸಿಸಿಐಗೆ ಪಿಸಿಬಿ ದಂಡ ಪಾವತಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ