Publish Date: Tue, 14 May 2019 (13:06 IST)
Updated Date: Tue, 14 May 2019 (13:09 IST)
ಎಟಿಎಂದಲ್ಲಿ ಹಣ ಡ್ರಾ ಮಾಡುವ ವಿಷಯದ ಆಗಬಾರದ ಘಟನೆ ನಡೆದಿದೆ.
ಎಟಿಎಂನಲ್ಲಿ ವ್ಯಕ್ತಿಗಳಿಬ್ಬರ ಹೊಡೆದಾಟ ನಡೆದಿದೆ. ಎಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ ಹಣ ಡ್ರಾ ಮಾಡಲು ಸಂಬಂಧಿಸಿದಂತೆ ವ್ಯಕ್ತಿಗಳಿಬ್ಬರು ಪರಸ್ಪರ ಹೊಡೆದಾಡುತ್ತಿರುವ ಘಟನೆ ನಡೆದಿದೆ.
ಹುಬ್ಬಳ್ಳಿ ನಗರದ ಚೆನ್ನಮ್ಮ ವೃತ್ತದ ಬಳಿ ಇರುವ ಎಕ್ಸಿಸ್ ಬ್ಯಾಂಕ್ ಎಟಿಎಂ ಬಳಿ ಹೊಡೆದಾಟ ನಡೆದಿದೆ.
ಎಟಿಎಂ ನಿಂದ ಹಣ ಡ್ರಾ ಮಾಡಲು ಸರದಿಯಲ್ಲಿ ನಿಲ್ಲುವ ಕುರಿತಂತೆ ಮಾತಿನ ಚಕಮಕಿ ಏರ್ಪಟ್ಟಿದ್ದು, ಬಳಿಕ ಇಬ್ಬರಲ್ಲಿ ಪರಸ್ಪರ ಹೊಡೆದಾಟ ನಡೆದಿದೆ. ಸರದಿ ಸಾಲಿನಲ್ಲಿ ನಿಲ್ಲುವ ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿರುವ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.
ಎಟಿಎಂನಲ್ಲಿ ವ್ಯವಸ್ಥಿತ ಭದ್ರತೆ ಹಾಗೂ ಭದ್ರತಾ ಸಿಬ್ಬಂದಿಗಳ ಕೊರತೆಯಿಂದ ಇಂತಹ ಘಟನೆ ಸಂಭವಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.