Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇನ್ನುಮುಂದೆ ಎಟಿಎಂನಲ್ಲಿಯೇ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು

ಇನ್ನುಮುಂದೆ ಎಟಿಎಂನಲ್ಲಿಯೇ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು
ನವದೆಹಲಿ , ಮಂಗಳವಾರ, 7 ಮೇ 2019 (08:13 IST)
ನವದೆಹಲಿ : ಎಟಿಎಂನಿಂದ ಹಣ ವಿತ್ ಡ್ರಾ ಮಾಡುವುದು ಮತ್ತು ಖಾತೆಯ ಬ್ಯಾಲೆನ್ಸ್ ಚೆಕ್ ಮಾಡಬಹುದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಇನ್ನುಮುಂದೆ ಬ್ಯಾಂಕ್ ಹೋಗಿ ಮಾಡುವ  ಹಲವು ಕೆಲಸಗಳನ್ನು ಎಟಿಎಂನಿಂದಲೇ ಮಾಡಬಹುದಂತೆ.




*ಎಟಿಎಂನಲ್ಲಿ ಸ್ಥಿರ ಠೇವಣಿ (ಎಫ್ಡಿ) ಇಡಬಹುದಂತೆ. ಜೊತೆಗೆ ಠೇವಣಿ ಅವಧಿ, ಮೊತ್ತ ಸೇರಿದಂತೆ ಎಲ್ಲ ಮಾಹಿತಿಯನ್ನು ಅದರಿಂದ ಪಡೆಯಬಹುದಂತೆ.


* ಎಟಿಎಂ ಕೇಂದ್ರಗಳ ಮೂಲಕವೇ ತೆರಿಗೆ ಪಾವತಿ ಮಾಡಬಹುದಂತೆ.


* ಕೆಲ ಎಟಿಎಂಗಳು ಹಣ ಜಮಾ ಮಾಡುವ ಸೌಲಭ್ಯವನ್ನೂ ಕಲ್ಪಿಸಿವೆ. ಅಲ್ಲಿ ಒಂದು ಬಾರಿ ರೂ. 49,900 ವರೆಗೆ ಹಣ ಜಮಾ ಮಾಡಬಹುದಂತೆ.


*ವಿಮೆ ಕಂಪನಿಗಳು ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡ ಹಿನ್ನಲೆಯಲ್ಲಿ ಗ್ರಾಹಕರು ಎಟಿಎಂ ಕೇಂದ್ರಗಳ ಮೂಲಕವೇ ಪ್ರೀಮಿಯಂ ಪಾವತಿ ಮಾಡಲು ಅವಕಾಶ ಸಿಕ್ಕಿದೆ.


*ಸಾಲದ ಅರ್ಜಿ ಸಲ್ಲಿಸಲು ಬ್ಯಾಂಕ್ ಗೆ ಹೋಗಬೇಕಾಗಿಲ್ಲ, ಎಟಿಎಂ ಮೂಲಕವೇ ಸಾಲಕ್ಕೆ ಅರ್ಜಿ ಸಲ್ಲಿಸಬಹುದಂತೆ.


* ಎಟಿಎಂ ಮೂಲಕ ಬೇರೆಯವರ ಖಾತೆಗೆ ಹಣವನ್ನು ವರ್ಗಾವಣೆ ಮಾಡಬಹುದು. ಒಂದು ಬಾರಿ ರೂ. 40 ಸಾವಿರವರೆಗೆ ಹಣ ವರ್ಗಾವಣೆ ಮಾಡಬಹುದು.


* ಟೆಲಿಫೋನ್, ವಿದ್ಯುತ್ ಸೇರಿದಂತೆ ಅನೇಕ ಬಿಲ್ ಗಳನ್ನು ಎಟಿಎಂ ಮೂಲಕ ಪಾವತಿ ಮಾಡುವ ಅವಕಾಶವಿದೆ. ಆದರೆ ಅದಕ್ಕೂ ಮೊದಲು ಬ್ಯಾಂಕ್ ವೆಬ್ಸೈಟ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕಾಗುತ್ತದೆ.


* ಕೆಲ ಕೇಂದ್ರಗಳಲ್ಲಿ ಎಟಿಎಂ ಮೂಲಕ ರೆಲ್ವೆ ಟಿಕೇಟ್ ಬುಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಾ ಸರಿ ಹೋದ್ರೆ...!: ಪ್ರಧಾನಿ ಪಟ್ಟದ ಬಗ್ಗೆ ಪರೋಕ್ಷ ಸುಳಿವು ಕೊಟ್ಟ ಮಾಯಾವತಿ ಸುಳಿವು